ಬೆಂಗಳೂರು: ಕಾಂಗ್ರೆಸ್ಸಿನಲ್ಲಿ ರಾಜೀನಾಮೆಯ ಕಾಟ ಇನ್ನೂ ಮುಗಿದಿಲ್ಲ. ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ಬ್ರಿಜೇಶ್ ಕಾಳಪ್ಪ ಇಂದು ರಾಜೀನಾಮೆ ನೀಡಿದ್ದಾರೆ. ಪಕ್ಷದ ಬಗ್ಗೆ ತಮ್ಮ ಶಕ್ತಿ ಮತ್ತು ಉತ್ಸಾಹದ ಕೊರತೆಯನ್ನು ಅವರು ಉಲ್ಲೇಖಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಜೊತೆಗಿನ 1997 ರಿಂದ ಇಲ್ಲಿವರೆಗಿನ ಸಂಬಂಧ ಮುಕ್ತಾಯ ಮಾಡುತ್ತಿರುವುದಾಗಿ ಘೋಷಿಸಿರುವ ಅವರು, ಟಿವಿ ವಾಹಿನಿಗಳಲ್ಲಿ ನಡೆದ ಚರ್ಚೆಗಳಲ್ಲಿ ಕಾಂಗ್ರೆಸ್ ವಕ್ತಾರರಾಗಿ ಸರಿಸುಮಾರು 6497 ಚರ್ಚೆಗಳಲ್ಲಿ ಪಕ್ಷದ ಪರವಾಗಿ ಭಾಗವಹಿಸಿದ್ದರು. ಬ್ರಿಜೇಶ್ ಕಾಂಗ್ರೆಸ್ ಪಕ್ಷದ ವಕ್ತಾರರಾಗಿ ಹಲವು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು.
2014 ಮತ್ತು 2019 ರ ಸೋಲಿನ ಸಮಯದಲ್ಲೂ ನಾನು ಎಂದಿಗೂ ಇರಲಿಲ್ಲ. ಉತ್ಸಾಹ ಮತ್ತು ಶಕ್ತಿಯ ಕೊರತೆಯನ್ನು ಅನುಭವಿಸಿದ್ದೇನೆ.ಇಲ್ಲಿಯವರೆಗಿನ ಅವಕಾಶಕ್ಕಾಗಿ ಧನ್ಯವಾದ ಎಂದು ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.