ಬೆಂಗಳೂರು: ಆರ್ ಎಸ್ ಎಸ್ ಅಣತಿಯಂತೆ ಸರ್ಕಾರ ನಡೆದುಕೊಳ್ತಿದ್ದು NEP ಮುಖಾಂತರ ನಾಗಪುರ,ಹಾವಿನಪುರದ ಒತ್ತಡಕ್ಕೆ ಮಣಿದು ಪಠ್ಯ ಪರಿಷ್ಕರಣೆ ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ನಾಡಿನ ಹಿರಿಯ ಸಾಹಿತಿಗಳು, ಚಿಂತಕರು, ಪ್ರಗತಿಪರರು, ಸ್ವಾಮೀಜಿಗಳು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ.
ದಾರ್ಶನಿಕರು,ಹೋರಾಟಗಾರರ ಪಠ್ಯ ಕೈಬಿಟ್ಟಿದ್ದಾರೆ. ಸಾಣೆಹಳ್ಳಿಶ್ರೀಗಳು, ಆದಿ ಚುಂಚನಗಿರಿ ಶ್ರೀಗಳು ವಿರೋಧ ವ್ಯಕ್ಯಪಡಿಸಿದ್ದಾರೆ. ಕುವೆಂಪು,ಬಸವಣ್ಣನವರ ಪಾಠ ಕೈಬಿಟ್ಟಿದ್ದು ಸರಿಯಲ್ಲ ಎಂದು ಹೇಳಿದ್ದಾರೆ.
ಸರ್ಕಾರ ಹಿಡನ್ ಅಜೆಂಡಾ ಜಾರಿಗೆ ತರುತ್ತಿದ್ದು ಕುವೆಂಪು, ಬಸವಣ್ಣನವರ ಪಾಠಗಳನ್ನು ಕೂಡಲೇ ಪಾಠಗಳಲ್ಲಿ ಸೇರಿಸುವಂತೆ ಒತ್ತಾಯಿಸಿದ್ದಾರೆ