ಜ್ಞಾನವಾಪಿ ಮಸೀದಿ ಸಮೀಕ್ಷಾ ಚಿತ್ರ, ವೀಡಿಯೋಗಳನ್ನು ತನ್ನ ಒಪ್ಪಿಗೆಯಿಲ್ಲದೆ ಬಹಿರಂಗಪಡಿಸುವಂತಿಲ್ಲ: ವಾರಣಾಸಿ ಕೋರ್ಟ್ ಆದೇಶ

Prasthutha|

ವಾರಣಾಸಿ: ಕೋರ್ಟ್ ನೇಮಿಸಿದ ಸಮೀಕ್ಷಾ ಆಯೋಗದಿಂದ ತೆಗೆದ ಜ್ಞಾನವಾಪಿ ಮಸೀದಿಯ ಫೋಟೋ,ವೀಡಿಯೋಗಳನ್ನು ತನ್ನ ಒಪ್ಪಿಗೆಯಿಲ್ಲದೆ ಯಾವುದೇ ಕಾರಣಕ್ಕೂ ಬಹಿರಂಗಪಡಿಸುವಂತಿಲ್ಲ ಎಂದು ವಾರಣಾಸಿ ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

- Advertisement -

ಮಸೀದಿ ಒಳಗಿನ ಚಿತ್ರ,ವೀಡಿಯೋಗಳನ್ನು ನೀಡಬೇಕೆಂದು ಕೋರಿ ಐವರು ಮಹಿಳೆಯರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಮಸೀದಿ ಆಡಳಿತ ಸಮಿತಿ ವಿರೋಧ ವ್ಯಕ್ತಪಡಿಸಿತ್ತು.

ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಪೀಠ, ಸಮೀಕ್ಷೆಯ ವೇಳೆ ತೆಗೆದ ಫೋಟೋ, ವೀಡಿಯೋ ವಿವಾದದ ಕುರಿತು ಆಕ್ಷೇಪಗಳೇನಾದರೂ ಇದ್ದರೆ ತಿಳಿಸಬಹುದು ಮತ್ತು ತನ್ನ ಅನುಮತಿಯಿಲ್ಲದೆ ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲವೆಂದು ನ್ಯಾಯಾಲಯ ತಿಳಿಸಿದೆ. ಈ ಕುರಿತು ಉಭಯ ಕಡೆಯವರೂ ಲಿಖಿತ ರೂಪರಲ್ಲಿ ಹೇಳಿಕೆ ನೀಡಬೇಕೆಂದು ಆದೇಶಿಸಿದೆ.



Join Whatsapp