ಶ್ರೀನಗರ: ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಗೋಪಾಲಪುರಾ ಪ್ರದೇಶದಲ್ಲಿ ಕಾಶ್ಮೀರಿ ಪಂಡಿತೆಯನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದು ಇದು ತಿಂಗಳೊಳಗೆ ನಡೆದ ಎರಡನೇ ಕೊಲೆ ಎಂದು ತಿಳಿದು ಬಂದಿವೆ. ಈ ಬಗ್ಗೆ ಸಾಮಾಜಿಕ ವಲಯಗಳಲ್ಲಿ ತೀವ್ರ ಆಕ್ಷೇಪ ಕೇಳಿಬರುತ್ತಿದ್ದು ಮೋದಿ ರಕ್ಷೆ ಕಾಶ್ಮೀರಿಗಳಿಗೋ ಅಥವಾ ಉಗ್ರರಿಗೋ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಹತ್ಯೆಯಾದ ಕಾಶ್ಮೀರಿ ಪಂಡಿತೆಯನ್ನು ಸಾಂಬಾ ಜಿಲ್ಲೆಯ ರಾಜ್ ಕುಮಾರ್ ಅವರ ಪತ್ನಿ ರಜನಿ ಹತ್ಯೆಯಾದ ಕಾಶ್ಮೀರಿ ಪಂಡಿತೆ ಎಂದು ಗುರುತಿಸಲಾಗಿದೆ. ರಜನಿ ಶಾಲಾ ಶಿಕ್ಷಕಿ ಹಾಗೂ ಜಮ್ಮು ವಿಭಾಗದ ಸಾಂಬಾ ನಿವಾಸಿಯಾಗಿದ್ದು, ಕುಲ್ಗಾಮ್ನ ಗೋಪಾಲ್ಪೋರಾ ಹೈಸ್ಕೂಲ್ನಲ್ಲಿ ರಜನಿ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಆಕೆಯನ್ನು ತಕ್ಷಣವೇ ಕುಲ್ಗಾಮ್ನ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾದರೂ ಅಲ್ಲಿ ಚಿಕಿತ್ಸೆ ಫಲಕಾರಿಯಾದೇ ಮೃತಪಟ್ಟಿದ್ದಾರೆ..
ಈ ಹಿಂದೆ ಮೇ 12 ರಂದು ಬುದ್ಗಾಮ್ ಜಿಲ್ಲೆಯಲ್ಲಿ ನೌಕರ ರಾಹುಲ್ ಭಟ್ ಎಂಬಾತನನ್ನು ಉಗ್ರರು ಹತ್ಯೆ ಮಾಡಿದ್ದರು. ಅದನ್ನು ಪ್ರತಿಭಟಿಸಿ ಮೋದಿ ಮತ್ತು ಅಮಿತ್ ಶಾ ವಿರುದ್ದ ಧಿಕ್ಕಾರ ಕೂಗುತ್ತಾ ಕಾಶ್ಮೀರಿ ಪಂಡಿತರು ಬೀದಿಗಿಳಿದಿದ್ದರು . ನಮ್ಮನ್ನು ಕಾಪಾಡಲು ಸಾಧ್ಯವಿಲ್ಲ ಎಂದಾದ ಮೇಲೆ ನಮ್ಮನ್ನು ಯಾಕೆ ಕಾಶ್ಮೀರಕ್ಕೆ ವಾಪಾಸ್ ಕರೆತಂದಿರಿ ಎಂದು ಪ್ರಶ್ನಿಸಿ ತೀವ್ರಗೊಂಡ ಪ್ರತಿಭಟನೆಯನ್ನು ಕೊನೆಗೆ ಪೊಲೀಸರು ಅಶ್ರುವಾಯು ಸಿಡಿಸಿ ಚದುರಿಸಬೇಕಾಗಿ ಬಂತು .ಕಳೆದ ವಾರ ಕೂಡಾ ಬುದ್ಗಾಮ್ನೀ ಚದೂರ ಪ್ರದೇಶದಲ್ಲಿ ಕಲಾವಿದೆ ಅಮ್ರೀನ್ ಭಟ್ ಸಾವನ್ನಪ್ಪಿದ್ದರು.
ಈ ಕೊಲೆಯನ್ನು ಉಲ್ಲೇಖಿಸಿ ಮೋದಿ ಸರಕಾರವನ್ನು ಟೀಕಿಸುತ್ತಿರುವ ನೆಟ್ಟಿಗರು ನೀವು ರಕ್ಷಣೆ ನೀಡುತ್ತಿರುವುದಾದರೂ ಯಾರಿಗೆ ಎಂದು ಪ್ರಶ್ನಿಸಿದ್ದಾರೆ.