ಬೆಂಗಳೂರು: ಆರೆಸ್ಸೆಸ್ ಹಿಡನ್ ಅಜೆಂಡಾದ ಹಿನ್ನೆಲೆಯಲ್ಲಿ ಪರಿಷ್ಕರಣೆಯಾಗಿರುವ ಪಠ್ಯ ಪುಸ್ತಕದ ಬಗ್ಗೆ ಸಾಮಾಜಿಕ ವಲಯಗಳಲ್ಲಿ ಹಲವಾರು ವಿರೋಧಗಳು ವ್ಯಾಪಕವಾಗುತ್ತಿವೆ.
ಖ್ಯಾತ ಸಾಹಿತಿಗಳು, ಕವಿಗಳ ಸಹಿತ ಹಲವು ಬರಹಗಾರರು ತಮ್ಮ ಬರಹಗಳನ್ನು ಹಿಂಪಡೆಯುತ್ತಿದ್ದಾರೆ. ಇದೀಗ ಹಿರಿಯ ಸ್ವಾಮೀಜಿಗಳಾದ ಸಾಣೇಹಳ್ಳಿ ಶ್ರೀಗಳ ಸಹಿತ ಹಲವು ಮಠಾಧೀಶರೂ ಪಠ್ಯ ಪುಸ್ತಕ ಪರಿಷ್ಕರಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ನಾಡಿನ ಸಾಕ್ಷಿಪ್ರಜ್ಞೆಗಳಾದ ಸಾಹಿತಿಗಳು, ಚಿಂತಕರು, ಪ್ರಗತಿಪರರು ಸೇರಿದಂತೆ ಅನೇಕ ಸ್ವಾಮೀಜಿಗಳು ಸಹ ಪಠ್ಯ ಪರಿಷ್ಕರಣೆ ವಿರುದ್ಧ ಗಟ್ಟಿಯಾಗಿ ಧ್ವನಿ ಎತ್ತುತ್ತಿದ್ದಾರೆ.
ಬಂಡಾಯದ ನೆಲದಲ್ಲಿ ಕೋಮುವಾದಿಗಳ ಹಿಡನ್ ಅಜೆಂಡಾ ಒಪ್ಪಲು ಸಾಧ್ಯವಿಲ್ಲ. ನಾಡಿನ ಹಿರಿಯ ಸ್ವಾಮೀಜಿಗಳಾದ ಸಾಣೇಹಳ್ಳಿ ಶ್ರೀಗಳ ಪ್ರತಿರೋಧಕ್ಕೆ ನಮ್ಮ ಬೆಂಬಲವಿದೆ ಎಂದು ಹೇಳಿದ್ದಾರೆ.