ಹಾಸನ: ಶಾಲಾ ಪಠ್ಯಪುಸ್ತಕಗಳ ಮರುಪರಿಷ್ಕರಣ ಸಮಿತಿ ರದ್ದುಗೊಳಿಸಿ, ಪ್ರೊ. ಬರಗೂರು ರಾಮಚಂದ್ರ ಸಮಿತಿ ರೂಪಿಸಿರುವ ಪಠ್ಯಪುಸ್ತಕಗಳನ್ನೇ ಮುಂದುವರಿಸಲು ಆಗ್ರಹಿಸಿ ಹಾಸನದಲ್ಲಿ ಸಮಾನ ಮನಸ್ಕರು ಮತ್ತು ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಸೋಮವಾರ ಬೆಳಗ್ಗೆ ಸಾಲಗಾಮೆ ರಸ್ತೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಭವನದ ಆವರಣದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಸಮಾನ ಮನಸ್ಕರು ಮತ್ತು ಸಂಘಟನೆಗಳ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡು ಶಾಲಾ ಪಠ್ಯಪುಸ್ತಕಗಳ ಮರುಪರಿಷ್ಕರಣ ಸಮಿತಿ ರದ್ದುಗೊಳಿಸಿ, ಪ್ರೊ. ಬರಗೂರು ರಾಮಚಂದ್ರ ಸಮಿತಿ ರೂಪಿಸಿರುವ ಪಠ್ಯಪುಸ್ತಕಗಳನ್ನೇ ಮುಂದುವರಿಸಲು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಕರ್ನಾಟಕದ ಶಾಲಾ ಪಠ್ಯಪುಸ್ತಕಗಳ ಮರು ಪರಿಷ್ಕರಣೆಯ ಹೆಸರಿನಲ್ಲಿ ವಿದ್ಯಾರ್ಥಿಗಳ ಪಠ್ಯಪುಸ್ತಕಗಳಲ್ಲಿ ಜಾತೀಯತೆ, ಮತೀಯವಾದ ಮತ್ತು ಸಂವಿಧಾನ ವಿರೋಧಿ ವಿಚಾರಗಳನ್ನು ತುರುಕಲಾಗುತ್ತಿದೆ. ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣ ಸಮಿತಿಯು ಹಲವಾರು ವಿಷಯಗಳ ತಜ್ಞರು ಮತ್ತು ಶಿಕ್ಷಣ ತಜ್ಞರನ್ನು ಒಳಗೊಂಡಿದ್ದ ಉಪಸಮಿತಿಗಳ ಅಧ್ಯಯನ ಮತ್ತು ಶಿಫಾರಸ್ಸುಗಳ ಆಧಾರದಲ್ಲಿ ವೈಜ್ಞಾನಿಕ ವಾಗಿ ಪರಿಷ್ಕರಣೆ ಮಾಡಿದ್ದ ಶಾಲಾ ಪಠ್ಯಪುಸ್ತಕಗಳನ್ನು ಇದುವರೆಗೂ ರಾಜ್ಯದ ವಿದ್ಯಾರ್ಥಿಗಳು ಅಭ್ಯಾ ಸ ಮಾಡಿದ್ದಾ ರೆ. ಈಗ ಏಕಾಏಕಿಯಾಗಿ ಶಿಕ್ಷ ಣ ಕ್ಷೇತ್ರದಲ್ಲಿ ಸ್ವಲ್ಪವೂ ಅನುಭ ವವಿಲ್ಲದ ಯಾವುದೇ ವಿಷಯದಲ್ಲಿಯೂ ತಜ್ಞನಲ್ಲದ ರೋಹಿತ್ ಚಕ್ರತೀರ್ಥ ಎಂಬ ವ್ಯಕ್ತಿಯ ಅಧ್ಯಕ್ಷತೆಯಲ್ಲಿ ಬಹುತೇಕ ಒಂದೇ ಜಾತಿ ಮತ್ತು ಸಿದ್ಧಾಂತಕ್ಕೆ ಸೇರಿದ 9 ಜನರ ಪಠ್ಯಪುಸ್ತಕಗಳ ಮರುಪರಿಷ್ಕರಣೆ ಸಮಿತಿಯನ್ನು ಸಾಮಾಜಿಕ ನ್ಯಾಯವನ್ನು ಕಡೆಗಣಿಸಿ ರಚಿಸಲಾಗಿದೆ ಎಂದು ಆರೋಪಿಸಿದರು.
ಜೊತೆಗೆ ಪಠ್ಯಪುಸ್ತಕದಲ್ಲಿ ರಾಷ್ಟ್ರಕವಿ ಕುವೆಂಪು ಅವರಿಗೆ ಅವಮಾನ ಮಾಡಲಾಗಿದ್ದು ಪಠ್ಯಪುಸ್ತಕಗಳ ಮರುಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿರು ವ ಸ್ವತಃ ರೋಹಿತ್ ಚಕ್ರತೀರ್ಥ ಕುವೆಂಪು ಅವರ ಬಗ್ಗೆ ಶೂದ್ರ ಎನ್ನುವ ಕಾರಣಕ್ಕೆ ಅವರ ಪ್ರತಿಭೆಯನ್ನು ಅಪಹಾಸ್ಯ ಮಾಡಿ ಹಾಗೂ ನಾಡಗೀತೆಯನ್ನು ಅತೀ ಕೆಟ್ಟ ಶಬ್ಧಗಳನ್ನು ಬಳಸಿ ತಿರುಚಿ ಬರೆದಿರುವ ಬರಹಗಳನ್ನು ಪ್ರಕಟಿಸಿ ಅವಮಾನಿಸಲಾಗಿದೆ ಎಂದು ದೂರಿದರು. ರಾಜ್ಯದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಶಾಲೆ ಆರಂಭವಾಗಿ ತಿಂಗಳು ಕಳೆದರೂ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಪಠ್ಯಪುಸ್ತಕ ಪೂರೈಸಲು ವಿಫಲವಾಗಿರುವ, ಪಠ್ಯಪುಸ್ತಕಗಳ ಮರುಪರಿಷ್ಕರಣೆಯ ವಿವಾದವನ್ನು ಸಂವಿಧಾನಾತ್ಮಕವಾಗಿ ನಿಭಾಯಿಸದ, ಅತ್ಯಂತ ಬೇಜವಾಬ್ದಾರಿಯುತ ವರ್ತನೆಯ ಮತ್ತು ಮಕ್ಕಳ ಶಿಕ್ಷ ಣದ ಜೊತೆಗೆ ಚೆಲ್ಲಾಟವಾಡುತ್ತಾ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಮಾರಕವಾಗಿರುವ ರಾಜ್ಯದ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ಅವರನ್ನು ಸಚಿವ ಸ್ಥಾನದಿಂದ ಕೂಡಲೇ ವಜಾಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಡಾ. ಹಂಪನಹಳ್ಳಿ ತಿಮ್ಮೇಗೌಡ, ಡಾ. ವೈ.ಎಸ್.ವೀರಭದ್ರಪ್ಪ, ಮೇಟಿಕೆರೆ ಹಿರಿಯಣ್ಣ, ಎಚ್.ಕೆ. ಜವರೇಗೌಡ, ಕೆ.ಟಿ. ಶಿವಪ್ರಸಾದ್, ಧರ್ಮೇಶ್, ವೆಂಕಟೇಶ್, ಎಚ್.ಕೆ.ಸಂದೇಶ್, ರಾಜಶೇಖರ್, ಕೃಷ್ಣದಾಸ್, ಬಿ.ಕೆ. ಮಂಜುನಾಥ್, ಅಂಬುಗ ಮಲ್ಲೇಶ್, ಎಂ.ಬಿ. ಪುಷ್ಪ, ಮುಬಶಿರ್ ಅಹಮದ್, ಎನ್.ಎಲ್. ಚನ್ನೇಗೌಡ, ಬಿ.ಎಸ್, ದೇವರಾಜ್, ಓಬಳೇಶ್ ಗಟ್ಟಿ, ಪ್ರೊ. ಡಿ.ಜಿ. ಕೃಷ್ಣೇಗೌಡ, ಗುರುಮೂರ್ತಿ, ಎಚ್.ಆರ್. ನವೀನ್ಕುಮಾರ್, ಎಂ.ಜಿ. ಪೃಥ್ವಿ, ಗಂಗಾಧರ್ ಬಹುಜನ, ರಮೇಶ್ ಇನ್ನೂ ಇತರರು `ಭಾಗವಹಿಸಿದ್ದರು..