ಸಿದ್ದು ಮೂಸೆವಾಲಾ ಕೊಲೆಗೆ ಸಿಎಂ ಭಗವಂತ್ ಮಾನ್ ಕಾರಣ: ಕಾಂಗ್ರೆಸ್ ಕಿಡಿ

Prasthutha|

ಚಂಡೀಗಡ: ಕಾಂಗ್ರೆಸ್ ಮುಖಂಡ, ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಕೊಲೆಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕಾರಣ ಎಂದು ಪಂಜಾಬ್ ವಿರೋಧ ಪಕ್ಷದ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಆರೋಪಿಸಿದ್ದಾರೆ.

- Advertisement -

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಪಂಜಾಬ್ ನಲ್ಲಿ ದಿನ ನಿತ್ಯ ಕೊಲೆಗಳು ನಡೆಯುತ್ತಿವೆ. ಪೊಲೀಸರು ಹತಾಶರಾಗಿದ್ದಾರೆ ಮತ್ತು ಅವರಿಗೆ ಯಾವುದೇ ನಿರ್ದೇಶನವಿಲ್ಲ. ಸಿದ್ದು ಮೂಸೆವಾಲಾ ಕೊಲೆ ರಾಜಕೀಯ ಹತ್ಯೆಯಾಗಿದೆ. ಸಿಎಂ ಭಗವಂತ್ ಮಾನ್ ರಾಜೀನಾಮೆ ನೀಡಲಿ. ಅದಕ್ಕೆ ಅವರೇ ಜವಾಬ್ದಾರರು’ ಎಂದು ಹೇಳಿದ್ದಾರೆ.

ಮಾನ್ಸಾ ಜಿಲ್ಲೆಯ ಜವಾಹರ್ಕೆ ಎಂಬ ಸ್ಥಳದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂಸೆವಾಲಾ ಅವರು ಮೃತಪಟ್ಟಿದ್ದಾರೆ. ಮೂಸೆವಾಲಾ ಮೇಲೆ 30 ಕ್ಕೂ ಹೆಚ್ಚು ಸುತ್ತು ಗುಂಡು ಹಾರಿಸಲಾಗಿತ್ತು. ಮೂಸೆವಾಲಾ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ಪಂಜಾಬ್ ಪೊಲೀಸರು ಶನಿವಾರವಷ್ಟೇ ಹಿಂಪಡೆದಿದ್ದರು.

- Advertisement -

►ಹತ್ಯೆಯ ಹೊಣೆ ಹೊತ್ತ ಕೆನಡಾ ಮೂಲದ ಗ್ಯಾಂಗ್‌ ಸ್ಟರ್

ಸಿಧು ಮೂಸೆವಾಲಾ ಅವರ ಹತ್ಯೆಯನ್ನು ತಾನು ಮಾಡಿರುವುದಾಗಿ ಕೆನಡಾ ಮೂಲದ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಹೇಳಿಕೊಂಡಿದ್ದಾನೆ.

ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ ನ ಸಹಚರ ಗೋಲ್ಡಿ, ಮೂಸೆವಾಲಾ ಮೇಲೆ 30ಕ್ಕೂ ಹೆಚ್ಚು ಸುತ್ತು ಗುಂಡು ಹಾರಿಸಿ ಹತ್ಯೆಗೈದಿದ್ದಾನೆ.



Join Whatsapp