ಮುಂಬೈ: ಪ್ರವಾದಿ ಮುಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಜ್ಞಾನವಾಪಿ ಮಸೀದಿ – ಕಾಶಿ ವಿಶ್ವನಾಥ್ ದೇವಸ್ಥಾನ ವಿಚಾರದ ಬಗ್ಗೆ ಖಾಸಗಿ ಚಾನೆಲೊಂದರ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕಿ, ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದಾದ ಒಂದು ದಿನದ ಬಳಿಕ ಸಾಮಾಜಿದ ಮಾಧ್ಯಮಗಳಲ್ಲಿ ಭಾರೀ ಆಕ್ರೋಶ ಭುಗಿಲೆದ್ದ ಬಳಿಕ ಈ ಸುದ್ದಿವಾಹಿನಿಯು ಶರ್ಮಾ ಅವರ ಈ ಹೇಳಿಕೆಯಿಂದ ಅಂತರ ಕಾಪಾಡಿತ್ತು.
ಮುಸ್ಲಿಮ್ ಸಂಘಟನೆಯಾದ ರಾಝಾ ಅಕಾಡೆಮಿ ನೀಡಿದ ದೂರಿನ ಆಧಾರದಲ್ಲಿ ಆರೋಪಿಯ ವಿರುದ್ಧ ಪಡೋನಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷಣ್ 295 ಎ, 153 3 ಮತ್ತು 505(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಮಧ್ಯೆ ಅಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮುಹಮ್ಮೆದ್ ಝುಬೈರ್ ಅವರು ಶುಕ್ರವಾರ ಶರ್ಮ ವಿರುದ್ಧದ ಪ್ರಚೋದನಕಾರಿ ಹೇಳಿಕೆಯ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳ್ಳಲ್ಲಿ ಹಂಚಿಕೊಂಡ ಬಳಿಕ ಶರ್ಮಾ ಮತ್ತು ಇತರರು ಝುಬೈರ್ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ.