ಕಾಠ್ಮಂಡು: ನಾಲ್ವರು ಭಾರತೀಯರನ್ನೊಳಗೊಂಡಂತೆ 22 ಮಂದಿ ಪ್ರಯಾಣಿಕರನ್ನು ಹೊತ್ತೊಯ್ದ ನೇಪಾಳ ವಿಮಾನವು ಹಿಮಾಲಯ ಪರ್ವತದ ತಪ್ಪಲಿನಲ್ಲಿ ಭಾನುವಾರ ಬೆಳಿಗ್ಗೆ ನಾಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾರಾ ಏರ್ ವಿಮಾನ 9.55ಕ್ಕೆ ಟೇಕ್ ಆಫ್ ಆಗಿದ್ದು, ಪರ್ವತ ಪಟ್ಟಣವಾದ ಜೋಮ್ಸ್’ಮ್ ಹಾರಾಟ ನಡೆಸುತ್ತಿದ್ದ 15 ನಿಮಿಷಕ್ಕೆ ವಿಮಾನ ಸಂಪರ್ಕವನ್ನು ಕಳೆದುಕೊಂಡಿದೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಸದ್ಯ ಈ ವಿಮಾನದಲ್ಲಿ 13 ನೇಪಾಳಿ, ಇಬ್ಬರು ಜರ್ಮನ್ನರು ಮತ್ತು ಮೂವರು ಸಿಬ್ಬಂದಿ ಪ್ರಯಾಣಿಸುತ್ತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಕಳೆದೆರಡು ದಿನಗಳಿಂದ ಈ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ ಎಂದು ವರದಿಯಾಗಿದ್ದು, ವಿಮಾನಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ.
ಮುಸ್ತಾಂಗ್’ನ ಥೊರೊಂಗ್ ಲಾ ಪರ್ವತದ ತಪ್ಪಲಿನಲ್ಲಿರುವ ಮುಕ್ತಿನಾಥ್ ದೇವಾಲಯಕ್ಕೆ ಭೇಟು ನೀಡುವ ಭಾರತೀಯ ಮತ್ತು ನೇಪಾಳಿ ಪ್ರವಾಸಿಗಳಿಗೆ ಇದು ಜನಪ್ರಿಯ ತಾಣವಾಗಿದೆ.