ಉಪ್ಪಿನಂಗಡಿ ನಿವಾಸಿ ಮಕ್ಕಾದಲ್ಲಿ ನಿಧನ; ಅಂತ್ಯ ಕ್ರಿಯೆಗೆ ಅನಿವಾಸಿ ಸಂಘಟನೆಗಳ ನೆರವು

Prasthutha|

ರಿಯಾದ್: ಕಳೆದ ಸುಮಾರು 20 ವರ್ಷಗಳಿಂದ ಸೌದಿ ಅರೇಬಿಯಾದ ಪವಿತ್ರ ಮಕ್ಕಾದಲ್ಲಿ ಉದ್ಯೋಗದಲ್ಲಿದ್ದ ಮೂಲತಃ ಮಂಗಳೂರು ಕುದ್ರೋಳಿ ನಿವಾಸಿ ಪ್ರಸ್ತುತ ಉಪ್ಪಿನಂಗಡಿಯಲ್ಲಿ ವಾಸ ಇರುವ ಜಲೀಲ್ ಇಫ್ತಿಕಾರ್ (57) ಹೃದಯಾಘಾತದಿಂದ ಮಕ್ಕಾದ ಅಲ್ ನೂರ್ ಹಾಸ್ಪಿಟಲ್ ನಲ್ಲಿ ನಿಧನ ಹೊಂದಿದರು.

- Advertisement -

ನಿಧನದ ಸುದ್ದಿಯನ್ನು ತಿಳಿದ ಮಕ್ಕಾದ ಅನಿವಾಸಿ ಭಾರತೀಯ ಸಂಘಟನೆಯ— ಮಲ್ನಾಡ್ ಗಲ್ಫ್ ಮತ್ತು ಎಜುಕೇಶನಲ್ ಟ್ರಸ್ಟ್ ನ ಅಂತರಾಷ್ಟ್ರೀಯ ಸಂಯೋಜಕ ಮುಹಮ್ಮದ್ ಇಕ್ಬಾಲ್ ಗಬ್ಗಲ್ ಹಾಗೂ ಇಂಡಿಯನ್ ಸೋಶಿಯಲ್ ಫೋರಮ್ ನ ಮಕ್ಕಾ ಘಟಕದ ಅಧ್ಯಕ್ಷ ಶಾಕಿರ್ ಹಕ್ ನೆಲ್ಯಾಡಿ ತಕ್ಷಣ ಹಾಸ್ಪಿಟಲ್ ಗೆ ಭೇಟಿ ನೀಡಿ ಮೃತರ ಅಂತ್ಯಕ್ರಿಯೆಗೆ ಬೇಕಾದ ದಾಖಲೆ ಪತ್ರಗಳನ್ನು ಸಂಗ್ರಹಿಸಿದರು.

 ಜಿದ್ದಾ ಇಂಡಿಯಾ ಸೋಶಿಯಲ್ ಫೋರಮ್ ನ ಅಶ್ರಫ್ ಬಜ್ಪೆ ಮೂಲಕ ಭಾರತೀಯ ರಾಯಭಾರ ಕಚೇರಿಗೆ ಕಳಿಸಿ ಕ್ಲಪ್ತ ಸಮಯಕ್ಕೆ ಎಲ್ಲಾ ದಾಖಲೆ ಪತ್ರಗಳನ್ನು ಸಂಗ್ರಹಿಸಿ ಮೃತರ ಸಂಬಂಧಿಕರಾದ ಮುಝಮ್ಮಿಲ್ ರವರಿಗೆ ಮೃತ ದೇಹ ಹಸ್ತಾಂತರ ಮಾಡಲಾಯಿತು. ಅನಂತರ ಪವಿತ್ರ ಹರಮ್ ನಲ್ಲಿ ಮೃತರ ಜನಾಝ ನಮಾಝ್ ನಿರ್ವಹಿಸಿ, ಹರಮ್ ಪರಿಸರದಲ್ಲಿರುವ ಜನ್ನತುಲ್ ಮಅಲ್ಲಾ ದಲ್ಲಿ ದಫನ ಮಾಡಲಾಯಿತು.

- Advertisement -

ಅಂತ್ಯಕ್ರಿಯೆಯಲ್ಲಿ ಅಬ್ದುಲ್ ರಝಾಕ್ ರಂತಡ್ಕ ಹಾಗೂ ಮೃತರ ಬಾವ ಶಂಸುದ್ದೀನ್ ಉಪ್ಪಿನಂಗಡಿ, ಹಲವು ಅನಿವಾಸಿಗಳು ಮತ್ತು ಮೃತರ ಆಪ್ತ ಮಿತ್ರರು ಭಾಗವಹಿಸಿದ್ದರು.ದಾಖಲೆ ಪತ್ರಗಳನ್ನು ಸಂಗ್ರಹಿಸಲು ಇಂಡಿಯನ್ ಓವರ್ಸಿಸ್ ಕಾಂಗ್ರೆಸ್ ನ ಇಬ್ರಾಹಿಂ ಕನ್ನಂಗಾರ್ ಸಹಕರಿಸಿದರು.



Join Whatsapp