ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆ ಪ್ರವೇಶಿಸದಂತೆ ಬ್ಯಾನರ್ ಹಾಕಿರುವ ಫೋಟೋ ವೈರಲ್

Prasthutha|

ಮೀರತ್ : ಇಲ್ಲಿನ ಪೊಲೀಸ್ ಠಾಣೆಯ ಹೊರಗೆ ಬಿಜೆಪಿ ಕಾರ್ಯಕರ್ತರು ಪ್ರವೇಶಿಸದಂತೆ ಬ್ಯಾನರ್ ಹಾಕಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement -

ಬ್ಯಾನರ್ ನಲ್ಲಿ “ಬಿಜೆಪಿ ಕಾರ್ಯಕರ್ತರೋಂ ಕಾ ಥಾನೆ ಮೈ ಆನಾ ಮನ ಹೈ” (ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ) ಎಂದು ಬರೆಯಲಾಗಿದ್ದು,  ಟಿಪ್ಪಣಿಯ ಕೆಳಗೆ ವೈದ್ಯಕೀಯ ಕಾಲೇಜು ಪೊಲೀಸ್ ಠಾಣೆಯ ಸ್ಟೇಷನ್  ಹೌಸ್ ಆಫೀಸರ್ (ಎಸ್ ಎಚ್ ಒ) ಹೆಸರನ್ನೂ ಬರೆಯಲಾಗಿದೆ.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕೂಡ ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, “ಆಡಳಿತ ಪಕ್ಷದ ಜನರು ಪೊಲೀಸ್ ಠಾಣೆಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿರುವುದು. ಐದಾರು ವರ್ಷಗಳಲ್ಲಿ ಇದು ಮೊದಲ ಬಾರಿಗೆ ಸಂಭವಿಸಿದೆ.  ಇದೇ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಸ್ಥಿತಿ” ಎಂದು  ಟ್ವೀಟ್ ಮಾಡಿದ್ದಾರೆ.

- Advertisement -

ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಪ್ರಭಾಕರ ಚೌಧರಿ ಮಾತನಾಡಿ, ‘ಮಧ್ಯಾಹ್ನ ಕೆಲ ಅಪರಿಚಿತ ವ್ಯಕ್ತಿಗಳು ಬ್ಯಾನರ್ ಹಾಕಿದ್ದರು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಕೆಲವರನ್ನು ಪೊಲೀಸರು ಗುರುತಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಬ್ಯಾನರ್ ಹಾಕುವ ಕೆಲವು ನಿಮಿಷಗಳ ಮೊದಲು, ಎರಡು ಗುಂಪುಗಳು ಕೆಲವು ಹಳೆಯ ಆಸ್ತಿ ವಿವಾದದ ಬಗ್ಗೆ ಪೊಲೀಸ್ ಠಾಣೆಗೆ ಬಂದಿದ್ದರು ಎಂದು ಅಧಿಕಾರಿ ಹೇಳಿದರು. ಎರಡೂ ಕಡೆಯಿಂದ ಯಾರಾದರೂ ಬ್ಯಾನರ್ ಹಾಕಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.



Join Whatsapp