ಮಂಡ್ಯ : ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದದ ಬಗ್ಗೆ ಮಾತಾಡಿದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಟಿಪ್ಪು ಸುಲ್ತಾನ್ ಕನಸಲ್ಲಿ ಬಂದು ದೇವಸ್ಥಾನಕ್ಕೆ ದಾನ ಕೊಟ್ಟ ಜಾಗ ವಾಪಾಸ್ ಕೊಡಿ ಅಂದರೆ ನೀವು ಬಿಟ್ಟುಕೊಡ್ತೀರಾ ಎಂದು ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಕುಮಾರಸ್ವಾಮಿ ದೇವಸ್ಥಾನ ,ಅಷ್ಟಮಂಗಲ ಮುಂತಾದುವುಗಳಲ್ಲೇ ಮಗ್ನರಾದ ಸರಕಾರ ಬಡವರ ಬಗ್ಗೆ ಚಿಂತಿಸುತ್ತಿಲ್ಲ .ಇದೇ ರೀತಿ ಮುಂದುವರಿದರೆ ದೇಶದ ಭವಿಷ್ಯ ಹಾಳಾಗುವುದಂತೂ ಖಂಡಿತಾ .ಈ ರೀತಿಯ ಗಲಭೆಗಳನ್ನು ಹುಟ್ಟುಹಾಕಿ ಆ ಮುಖಾಂತರ ಬಿಜೆಪಿ ಮತ ಪಡೆಯಲು ಪ್ರಯತ್ನ ಪಡುತ್ತಿದ್ದು ಇಂತಹಾ ಆಟಗಳೆಲ್ಲವೂ ಬರಿಯ ಹತ್ತು ತಿಂಗಳು ಮಾತ್ರ ಎಂದು ಹೇಳಿದ್ದಾರೆ.
ಜಾಮಿಯಾ ಮಸೀದಿ ನಂಗೇ ಬೇಕು ಎಂದು ದೇವರು ಕನಸಲ್ಲಿ ಬಂದು ಕೇಳಿದ್ನಾ ಎಂಬ ಎಚ್ ಡಿಕೆ ಪ್ರಶ್ನೆಗೆ ಮಾಧ್ಯಮ ವರದಿಗಾರರು ‘ಹೌದಂತೆ ಅವರು ಹಾಗೆನ್ನುತ್ತಿದ್ದಾರೆ’ ಎಂದು ಉತ್ತರಿಸಿದ್ದು ಹಾಗಾದರೆ ಟಿಪ್ಪು ಸುಲ್ತಾನ್ ಮುಸ್ಲಿಮರ ಕನಸಲ್ಲಿ ಬಂದು ಆತ ದಾನಕೊಟ್ಟ ಜಾಗ ವಾಪಾಸ್ ಕೊಡಿ ಅಂದರೆ ನೀವು ದೇವಸ್ಥಾನ ಬಿಟ್ಟುಕೊಡ್ತೀರಾ ಎಂದು ಕೇಳಿದ್ದು ದೇವಸ್ಥಾನಗಳಿಗೆ ಟಿಪ್ಪುವಿನ ಕೊಡುಗೆ ಅಪಾರ , ಅವೆಲ್ಲವೂ ಹಿಂದಿರುಗಿಸುತ್ತೀರಾ ಎಂದು ಪ್ರಶ್ನಿಸಿದ್ದಾರೆ.