ಕಾಶ್ಮೀರ | ಮೃತಪಟ್ಟ 1 ಗಂಟೆಯ ಬಳಿಕ ಸಮಾಧಿಯೊಳಗೆ ಮಗು ಜೀವಂತ !

Prasthutha|

ಕಾಶ್ಮೀರ: ನವಜಾತ ಶಿಶುವೊಂದು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದ 1 ಗಂಟೆಯ ಬಳಿಕ ಮಗುವನ್ನು ಸಮಾಧಿ ಮಾಡಲಾಗಿದ್ದು, ಮತ್ತೆ ಸಮಾಧಿಯನ್ನು ಅಗೆದಾಗ ಮಗು ಜೀವಂತವಾಗಿದ್ದ ಘಟನೆ ಜಮ್ಮು, ಕಾಶ್ಮೀರದ ಬನ್ನಿಹಾಳ್ ನಲ್ಲಿ ನಡೆದಿದೆ.

- Advertisement -

ಸರ್ಕಾರಿ ಉಪ ಜಿಲ್ಲಾ ಆಸ್ಪತ್ರೆಯಲ್ಲಿ ಜನಿಸದ ಹೆಣ್ಣು ಮಗುವನ್ನು ಹುಟ್ಟಿದ ತಕ್ಷಣ ಮೃತಪಟ್ಟಿದೆ ಎಂದು ಘೋಷಿಸಲಾಗಿತ್ತು. ಬಳಿಕ ಮಗುವನ್ನು ಹತ್ತಿರದ ಸಮೀಪದ ಸ್ಮಶಾನದಲ್ಲಿ ಸಮಾಧಿ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿದ ಗ್ರಾಮಸ್ಥರು ಮೃತದೇಹವನ್ನು ಹೊರತೆಗೆದು ನಿಮ್ಮ ಊರಿನಲ್ಲಿ ಸಮಾಧಿ ನಡುಸುವಂತೆ ಆಗ್ರಹಿಸಿದ್ದಾರೆ. ಈ ನಿಟ್ಟಿನಲ್ಲಿ ಸಮಾಧಿಯನ್ನು ಮತ್ತೆ ಅಗೆದು ಮಗುವಿನ ಮೃತದೇಹವನ್ನು ಹೊರತೆಗೆಯಲಾಯ್ತು.

ಈ ವೇಳೆ ಮಗು ಜೀವಂತವಾಗಿರುವುದನ್ನು ಕಂಡು ಹೆತ್ತವರು ದಂಗಾಗಿದ್ದಾರೆ. ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ಮಗುವಿನ ಪೋಷಕರು ಮತ್ತು ಸಂಬಂಧಿಕರು ಆಸ್ಪತ್ರೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಮಣಿದ ಆಡಳಿತ ಮಂಡಳಿ, ಹೆರಿಗೆ ವಾರ್ಡ್ ನ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಿ ತನಿಖೆಗೆ ಆದೇಶಿಸಿದೆ.

- Advertisement -

ಬಶ್ರತ್ ಅಹ್ಮದ್ ಗುಜ್ಜಾರ್, ಶಮೀನಾ ಬೇಗಂ ದಂಪತಿಗೆ ಜನಿಸಿದ ಮಗುವನ್ನು ಆಸ್ಪತ್ರೆಯ ನಿರ್ಲಕ್ಷ್ಯದಿಂದ ಸಮಾಧಿ ಮಾಡುವ ಪ್ರಸಂಗ ನಿರ್ಮಾಣವಾಗಿತ್ತು ಎಂದು ಸರ್ಪಂಚ್ ಮನ್ಸೂರ್ ವಾನಿ ತಿಳಿಸಿದ್ದಾರೆ.

ಮಗುವಿಗೆ ಪ್ರಾಥಮಿಕ ಶುಶ್ರೂಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶ್ರೀನಗರದ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಶಿಫಾರಸು ಮಾಡಲಾಗಿದೆ ಎಂದು ವಾನಿ ತಿಳಿಸಿದ್ದಾರೆ.



Join Whatsapp