ಬಾರ್‌ ಗಿರಾಕಿಗಳಿಗೆ ತೊಂದರೆ ಆಗುತ್ತೆ ಎಂದು ಬೃಹತ್‌ ಮರವನ್ನೇ ಕಡಿದ ಭೂಪರು

Prasthutha|

ಕಾಪು: ಬಾರ್‌ ಗೆ ಬರುವವರಿಗೆ ತೊಂದರೆ ಆಗುತ್ತೆ ಎಂದು ಬಹುವರ್ಷದ ಮರವನ್ನ ಕಡಿದು ಹಾಕಿದ ಘಟನೆ ಕಾಪು ಪೇಟೆಯ ಒಳಭಾಗದ ಕಾರ್ಪೊರೇಷನ್ ಬ್ಯಾಂಕಿನ ಮುಂಭಾಗದ ಸುವರ್ಣ ಬಾರ್ ಬಳಿಯಲ್ಲಿ ನಡೆದಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -

ಹಕ್ಕಿಗಳ ಪಿಕ್ಕೆಗಳು ನೆಲಕ್ಕೆ ಬಿದ್ದು ಬಾರ್ ಗೆ ಬರುವ ಗಿರಾಕಿಗಳಿಗೆ ತೊಂದರೆಯಾಗುವ ದೃಷ್ಟಿಯಿಂದ ಮರವನ್ನು ಕಡಿಯಲಾಗಿದೆ ಎಂಬ ಆಘಾತಕಾರಿ ಮಾಹಿತಿ ದೊರಕಿದೆ. ಬಾರ್ ನಿರ್ಮಾಣವಾಗುವ ಮುನ್ನವೆ ಇದ್ದ ಈ ಮರವು ಸದ್ಯ ನೂರಾರು ಹಕ್ಕಿಗಳಿಗೆ ವಾಸಸ್ಥಾನವಾಗಿತ್ತು ಎನ್ನಲಾಗಿದೆ. ಕೆಲವು ಗೂಡುಗಳಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಹೊರಬರುವ ಮೊಟ್ಟೆಯೊಳಗಿನ ಮರಿಗಳಿದ್ದವು.

ಇಂತಹ ಮರವನ್ನು ಬಾರ್ ಗೆ ಬರುವ ಗಿರಾಕಿಗಳಿಗೆ ತೊಂದರೆಯಾಗುತ್ತೆಂಬ ದೃಷ್ಟಿಯಿಂದ ಕಡಿದು ಹಾಕಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಆಕ್ರೋಶ ಕೇಳಿ ಬರುತ್ತಿದೆ.



Join Whatsapp