ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಆರೋಪ: ಮೇ 26ಕ್ಕೆ ವಿಚಾರಣೆ ಮುಂದೂಡಿದ ವಾರಣಾಸಿ ನ್ಯಾಯಾಲಯ

Prasthutha|

ವಾರಣಾಸಿ: ಐತಿಹಾಸಿಕ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂಬ ಆರೋಪವನ್ನು ಪ್ರಶ್ನಿಸಿ ಅಂಜುಮನ್ ಇಸ್ಲಾಮಿಯಾ ಸಮಿತಿ ಸೇರಿದಂತೆ ಮುಸ್ಲಿಮ್ ಸಂಘಟನೆಗಳು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ವಾರಣಾಸಿ ನ್ಯಾಯಾಲಯ ಮೇ 26ಕ್ಕೆ ವಿಚಾರಣೆ ನಡೆಸಲು ಇಂದು ನಿರ್ಧರಿಸಿದೆ.

- Advertisement -

ಆಯೋಗದ ವರದಿಗೆ ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯ ಎರಡೂ ಕಡೆಯಿಂದ 7 ದಿನಗಳ ಒಳಗೆ ಅರ್ಜಿ ಆಹ್ವಾನಿಸಿದೆ.

ಸೋಮವಾರ ನಡೆದ ವಿಚಾರಣೆಯ ವೇಳೆ ಆದೇಶ ಸಂಖ್ಯೆ 7 ನಿಯಮ 11 CPC ಅನ್ವಯ ಈ ಅರ್ಜಿಯನ್ನು ಪರಿಗಣಿಸಬೇಕೋ ಅಥವಾ ಬೇಡವೋ ಎಂಬ ತೀರ್ಪನ್ನು ನ್ಯಾಯಾಲಯ ಕಾಯ್ದಿರಿಸಿತ್ತು.



Join Whatsapp