ಭಾರಿ ಮಳೆ: ಕೇದಾರನಾಥ ಯಾತ್ರೆಗೆ ತಾತ್ಕಾಲಿಕ ಬ್ರೇಕ್

Prasthutha|

ಡೆಹ್ರಾಡೂನ್: ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇದಾರನಾಥ್ ಯಾತ್ರೆಗೆ ಸ್ಥಳೀಯಾಡಳಿತ ತಾತ್ಕಾಲಿಕವಾಗಿ ಬ್ರೇಕ್ ನೀಡಿದೆ.

- Advertisement -

ಯಾತ್ರೆಯ ವೇಳೆ ಭಕ್ತಾಧಿಗಳು ಗೌರಿಕುಂಡ್ ಮತ್ತು ಕೇದಾರನಾಥ್ ಮಧ್ಯೆ ಹಲವು ಕಡೆ ಶಿಬಿರಗಳಲ್ಲಿ ತಂಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಮಧ್ಯೆ ಪ್ರತಿಕೂಲ ಹವಾಮಾನ ಸರಿಯಾಗುವವರೆಗೆ ದೇವಸ್ಥಾನದ ಕಡೆಗೆ ತೆರಳದೆ ಶಿಬಿರಗಳಲ್ಲಿಯೇ ಉಳಿಯುವಂತೆ ಭಕ್ತಾಧಿಗಳಿಗೆ ಜಿಲ್ಲಾಡಳಿತ ಸೂಚಿಸಿದೆ. 2013 ರಲ್ಲಿ ಕೇದಾರನಾಥದಲ್ಲಿ ದುರ್ಘಟನೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತ ಈ ಕ್ರಮಕ್ಕೆ ಮುಂದಾಗಿದೆ.



Join Whatsapp