ರೋಹಿತ್ ಚಕ್ರತೀರ್ಥ ಸಿಇಟಿ ಪ್ರೊಫೆಸರ್ ಎಂದ ಬಿಸಿ ನಾಗೇಶ್: ರಾಜ್ಯದಲ್ಲಿ ಸಿಇಟಿ ಯುನಿವರ್ಸಿಟಿ ಇದೆಯೇ? ಎಲ್ಲಿದೆ ಎಂದು ಪ್ರಶ್ನಿಸಿದ ಕಾಂಗ್ರೆಸ್ !

Prasthutha|

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಪರವಾಗಿ ಬ್ಯಾಟ್ ಬೀಸಿದ್ದ ಶಿಕ್ಷಣ ಸಚಿವ ಬಿಸಿ ನಾಗೇಶ್ ವಿರುದ್ಧ ಕಿಡಿಕಾರಿರುವ ರಾಜ್ಯ ಕಾಂಗ್ರೆಸ್ ಶಿಕ್ಷಣ ಇಲಾಖೆ ಶತಮೂರ್ಖರ ಕೈಯ್ಯಲ್ಲಿದೆ ಎಂದು ಒಪ್ಪಿಕೊಳ್ಳಿ ಎಂದು ಹೇಳಿದೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಕೆಪಿಸಿಸಿ, ಶಿಕ್ಷಣ ಸಚಿವರೇ, ಪಠ್ಯ ಪುಸ್ತಕ ಸಮಿತಿಯ ಪೋಕರಿ ಅಧ್ಯಕ್ಷನನ್ನು ಸಮರ್ಥಿಸುತ್ತಾ ಸಿಇಟಿ ಪ್ರೊಫೆಸರ್ ಆಗಿದ್ದರು ಎಂದಿದ್ದೀರಿ. ರಾಜ್ಯದಲ್ಲಿ ಸಿಇಟಿ ಯುನಿವರ್ಸಿಟಿ ಇದೆಯೇ? ಎಲ್ಲಿದೆ? ಅಥವಾ ವಾಟ್ಸಾಪ್ ಯೂನಿವರ್ಸಿಟಿಯ ರೀತಿ ಅದೂ ನಿಮ್ಮ ಪ್ರೊಪೆಗಂಡಾ ಯುನಿವರ್ಸಿಟಿಯೇ? ಸ್ಪಷ್ಟಪಡಿಸಿ ಎಂದು ಕಾಲೆಳೆದಿದೆ.

ರೋಹಿತ್ ಚಕ್ರತೀರ್ಥ ಯಾರು, ಅವರ ಅರ್ಹತೆಯೇನು? ಅವರು ಶಿಕ್ಷಣ ತಜ್ಞರಲ್ಲವಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಶಿಕ್ಷಣ ಸಚಿವ ಬಿ.ಸಿ ನಾಗೇಶ್, “ರೋಹಿತ್ ಚಕ್ರತೀರ್ಥ ಐಐಟಿ ಮತ್ತು ಸಿಇಟಿಗೆ ಪ್ರೊಫೆಸರ್ ಆಗಿದ್ದರು” ಎಂದಿದ್ದರು.



Join Whatsapp