CAA ವಿರೋಧಿ ಪ್ರತಿಭಟನಕಾರರು ಭಾರತದ ಭಾಗವಾಗಲು ಬಯಸುತ್ತಾರೆ, ಸಾರ್ವಭೌಮತ್ವವನ್ನು ಪ್ರಶ್ನಿಸುತ್ತಿಲ್ಲ: ಜಾಮೀನು ಅರ್ಜಿಯ ವೇಳೆ ಉಮರ್ ಖಾಲಿದ್

Prasthutha|

ನವದೆಹಲಿ: CAA ವಿರೋಧಿ ಪ್ರತಿಭಟನಕಾರರು ದೇಶದ ಭಾಗವಾಗಲು ಬಯಸುತ್ತಾರೇ ಹೊರತು ಸಾರ್ವಭೌಮತ್ವವನ್ನು ಬೆದರಿಸಲು ಅಥವಾ ಭಯೋತ್ಪಾದನೆಯನ್ನು ಹರಡಲು ಅಲ್ಲ ಎಂದು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ.

- Advertisement -

ದೆಹಲಿ ಗಲಭೆಯ ಪಿತೂರಿ ಆರೋಪದಲ್ಲಿ ಬಂಧಿತರಾಗಿರುವ ಮಾಜಿ ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್ ಅವರ ಜಾಮೀನು ಅರ್ಜಿಯ ವಿಚಾರಣೆ ದೆಹಲಿ ಕೋರ್ಟ್ ನಲ್ಲಿ ನಡೆಯುತ್ತಿದೆ.

ನಾಗರಿಕರಿಗೆ ಪ್ರಭುತ್ವ ಮಾಡುವ ತಾರತಮ್ಯ ನೀತಿಯನ್ನು ಪ್ರತಿಭಟನಕಾರರು ವಿರೋಧಿಸುತ್ತಾರೇ ಹೊರತು ಮತ್ಯಾವ ಉದ್ದೇಶವೂ ಅವರಿಗಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

- Advertisement -

2020 ರ ದೆಹಲಿ ಗಲಭೆಗೆ ಪಿತೂರಿ ಆರೋಪಕ್ಕೆ ಸಂಬಂಧಿಸಿದಂತೆ UAPA ಕಾಯ್ದೆ ಅಡಿಯಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್ ಅವರಿಗೆ ದೀರ್ಘಕಾಲದಿಂದ ಜಾಮೀನು ನಿರಾಕರಿಸುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ರಜನೀಶ್ ಭಟ್ನಾಗರ್ ಅವರನ್ನೊಳಗೊಂಡ ವಿಭಾಗೀಯ ಪೀಠದ ಎದುರು ಈ ವಾದವನ್ನು ಮಂಡಿಸಿದ್ದಾರೆ.

ಹಿರಿಯ ವಕೀಲ ತ್ರಿದೀಪ್ ಪೈಸ್ ಬಂಧಿತ ಉಮರ್ ಖಾಲಿದ್ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿದ್ದಾರೆ.



Join Whatsapp