ಬೆಂಗಳೂರು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್ ಗೆ 8 ರೂಪಾಯಿ ಮತ್ತು ಡೀಸೆಲ್ ಗೆ 6 ರೂಪಾಯಿ ಕಡಿತಗೊಳಿಸಿದ ಬಳಿಕ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 96.72 ರೂ.ಗೆ ಇಳಿಕೆಯಾಗಿದ್ದು, ಪ್ರತಿ ಲೀಟರ್ ಡೀಸೆಲ್ ಬೆಲೆ ಈಗ 89.62 ಆಗಿದೆ. ಮಹಾರಾಷ್ಟ್ರ ಸರ್ಕಾರವು ಭಾನುವಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಕಡಿತಗೊಳಿಸಿದೆ. ಪೆಟ್ರೋಲ್ ಮೇಲಿನ ವ್ಯಾಟ್ ಅನ್ನು ಲೀಟರ್ ಗೆ 2.08 ರೂ ಕಡಿತಗೊಳಿಸಲಾಗಿದೆ ಮತ್ತು ಡೀಸೆಲ್ ಮೇಲೆ ಲೀಟರ್ ಗೆ 1.44 ರೂ ಇಳಿಕೆಯಾಗಿದೆ.
ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಯಥಾಸ್ಥಿತಿಯಲ್ಲಿದೆ. ಪೆಟ್ರೋಲ್ ಲೀಟರ್ ಗೆ 101.96 ರೂ. ಮಾರಾಟವಾದರೆ, ಡೀಸೆಲ್ ದರ 87.91ರೂ.ಗೆ ಮಾರಾಟವಾಗುತ್ತಿದೆ. ಹುಬ್ಬಳ್ಳಿಯಲ್ಲಿ ಪೆಟ್ರೋಲ್ ದರ ಒಂದು ಲೀಟರ್ ಗೆ 101.65 ರೂಪಾಯಿ ಮತ್ತು ಡೀಸೆಲ್ ದರ ಒಂದು ಲೀಟರ್ ಗೆ 87.65 ರೂಪಾಯಿ ಇದೆ.
ಪ್ರಮುಖ ನಗರಗಳಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರ ಹೀಗಿದೆ..
Prasthutha|