ಕೊಡಗು: ಅಲ್ಯುಮಿನಿಯಂ ಏಣಿಗೆ ವಿದ್ಯುತ್ ಸ್ಪರ್ಶ: ಕಾರ್ಮಿಕ ದುರ್ಮರಣ

Prasthutha|

ಮಡಿಕೇರಿ:ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದ ಮರ-ಗಿಡಗಳ ಕೊಂಬೆಗಳನ್ನು ಕಡಿಯುತ್ತಿದ್ದ ಸಂದರ್ಭ ಕಾರ್ಮಿಕರೊಬ್ಬರು ಸಾವಿಗೀಡಾದ ಘಟನೆ ನಾಪೋಕ್ಲು ಸಮೀದ ಕಕ್ಕಬ್ಬೆ- ಮರಂದೋಡ ಗ್ರಾಮದಲ್ಲಿ ನಡೆದಿದೆ.

- Advertisement -

ಮೃತರನ್ನು ಆಚಾರಿ ರುದ್ರಪ್ಪ (65) ಎಂದು ಗುರುತಿಸಲಾಗಿದೆ.   ವಿದ್ಯುತ್ ನಿಗಮದ ಲೈನ್ಮ್ಯಾನ್  ಜೊತೆಯಲ್ಲಿ ಮರದ ಕೊಂಬೆ ಕಡಿಯಲೆಂದು ಮರಕ್ಕೆ ಅಲ್ಯೂಮಿನಿಯಂ ಏಣಿಯನ್ನು ಇರಿಸಿದಾಗ, ಆಕಸ್ಮಿಕವಾಗಿ ಏಣಿ ವಿದ್ಯುತ್ ತಂತಿಗೆ ತಗುಲಿ  ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರು ಪತ್ನಿ ಸೀತಮ್ಮ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದು, ಮನೆಗೆ ಆಸರೆಯಾಗಿದ್ದ ಗಂಡನ ಸಾವಿನಿಂದ ಕುಟುಂಬ ಬೀದಿ ಪಾಲಾಗಿದೆ. ಇದಕ್ಕೆ ಚೆಸ್ಕಾಂ ನೇರ ಹೊಣೆಯಾಗಿದ್ದು, ಕೂಡಲೇ ಮೃತ ರುದ್ರಪ್ಪ ಕುಟುಂಬಕ್ಕೆ ಪರಿಹಾರ ಒದಗಿಸುವಂತೆ ಗ್ರಾಮಸ್ಥರ ಪರವಾಗಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಚಂಡೀರ ಜಗದೀಶ್ ಒತ್ತಾಯಿಸಿದ್ದಾರೆ.ಸ್ಥಳಕ್ಕೆ ಠಾಣಾಧಿಕಾರಿ ಸದಾಶಿವ ಮತ್ತು ಸಿಬ್ಬಂದಿ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.



Join Whatsapp