ಬೆಂಗಳೂರು: ಶಿಕ್ಷಣ ತಜ್ಞ ಅಲ್ಲದೇ ಇರುವವರು ಪಠ್ಯ ಪುಸ್ತಕ ಪರಿಷ್ಕರಣೆಯ ಅಧ್ಯಕ್ಷನಾಗಿರುವುದು ದುರಂತ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ವಿಷಾದ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋ಼ಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯ ಪುಸ್ತಕ ರಾಜಕೀಯ ಸಂಘರ್ಷ ಅಲ್ಲ, ಒಂದು ದೇಶದಲ್ಲಿ ಶಿಕ್ಷಣ ಮತ್ತು ಸಂಸ್ಕೃತಿ ಹಾಳಾದರೆ ದೇಶ ಹಾಳಾದಂತೆ. ಸರ್ಕಾರದ ಒಂದೊಂದು ನಿಯಮದಿಂದ ಶಿಕ್ಷಣವನ್ನು ಹಾಳುಮಾಡ್ತಾಇದ್ದೀವಿ ಎಂದು ವಿಷಾದಿಸಿದರು.
ಯಾರಪ್ಪ ನೀನು ಶಿಕ್ಷಣ ತಜ್ಞನ, ಯಾವ ಯುನಿವರ್ಸಿಟಿಯಲ್ಲಿ ಪಾಠ ಮಾಡುತ್ತಿದ್ದದು ಎಂದು ರೋಹಿತ್ ಚಕ್ರವರ್ತಿ ಕುರಿತು ವ್ಯಂಗ್ಯವಾಡಿದ ಅವರು ಶಿಕ್ಷಣ ತಜ್ಞ ಅಲ್ಲದೇ ಇರುವವರು ಪಠ್ಯ ಪುಸ್ತಕ ಪರಿಷ್ಕರಣೆಯ ಅಧ್ಯಕ್ಷನಾಗಿರುವುದು ದುರಂತ ಎಂದು ಹೇಳಿದ್ದಾರೆ.