ಉಡುಪಿ: ಹಿರೇಬೆಟ್ಟುವಿನಲ್ಲಿ ನಡೆದ ದೈವಸ್ಥಾನ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಹಿರೇಬೆಟ್ಟುವಿನ ಭಾಸ್ಕರ್ ಶೆಟ್ಟಿ (49) ಎಂದು ಗುರುತಿಸಲಾಗಿದೆ.
ಕೆಲ ದಿನಗಳ ಹಿಂದೆ ಹಿರೇಬೆಟ್ಟುವಿನ ಬಾಳಕಟ್ಟು ಬೀಡುಮನೆ ದೈವಸ್ಥಾನಕ್ಕೆ ನುಗ್ಗಿದ ಆರೋಪಿ ಅಲ್ಲಿದ್ದ ಆರತಿ, ಪಂಚಲೋಹದ ಮುಖ, ಹಿತ್ತಾಳೆ ಸಾಮಗ್ರಿ, ಗಂಟೆ ಸಹಿತ 50 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶಿಸಿದೆ.