ಮುಂಬೈ: ಟಾಟಾ ಗ್ರೂಪ್ ನಡೆಸುತ್ತಿರುವ ಏರ್ ಇಂಡಿಯಾದ A320neo ವಿಮಾನವು ಟೇಕ್ ಆಫ್ ಆದ ಕೇವಲ 27 ನಿಮಿಷಗಳ ಬಳಿಕ ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದ ಇಂಜಿನ್ ತಾಂತ್ರಿಕ ದೋಷದಿಂದಾಗಿ ಅನಿವಾರ್ಯವಾಗಿ ಭೂಸ್ಪರ್ಶ ಮಾಡಬೇಕಾಯಿತು ಎಂದು ಮೂಲಗಳು ತಿಳಿಸಿವೆ.
ಬದಲಿ ವಿಮಾನದ ಮೂಲಕ ಪ್ರಯಾಣಿಕರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ನಾಗರಿಕ ವಿಮಾನಯಾನ ಸಂಸ್ಥೆಯ ಮಹಾನಿರ್ದೇಶನಾಲಯವು ಘಟನೆಯ ಕುರಿತು ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ವಿಮಾನದ ಇಂಜಿನ್ ಸ್ಥಗಿತಗೊಂಡ ಬಳಿಕ ಪೈಲಟ್ ಮುಂಬೈ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 10.10 ಕ್ಕೆ ತುರ್ತು ಭೂಸ್ಪರ್ಶ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.