ಕೊಡಗು: ಮುಂದುವರಿದ ಮಳೆ; ಜೆಸಿಬಿ ಮೇಲೆ ಬಿದ್ದ ಮರ

Prasthutha|

ಕೊಡಗು: ಭಾರೀ ಮಳೆಗೆ ಗೋಣಿಕೊಪ್ಪ ಮತ್ತು ವಿರಾಜಪೇಟೆಯ ಮುಖ್ಯ ರಸ್ತೆಯಲ್ಲಿ ಜೆಸಿಬಿ ಮೇಲೆ ಮರ ವೊಂದು ಉರುಳಿ ಬಿದ್ದಿದ್ದು,   ಅದೃಷ್ಟಾವತ್ ಜೆಸಿಬಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

- Advertisement -

ಜಿಲ್ಲೆಯಲ್ಲಿ ಎರಡು ದಿನಗಳಿಂದ ಬಿಟ್ಟು ಬಿಟ್ಟು ಸುರಿಯುತ್ತಿರುವ  ಮಳೆ ಇಂದೂ ಮುಂದುವರಿದಿದ್ದು, ಜನರನ್ನು ಹೈರಾಣಾಗಿಸಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜಿಲ್ಲೆಯ ಅಲ್ಲಲ್ಲಿ ಹಲವು ಅವಾಂತರಗಳು ಸೃಷ್ಟಿಯಾಗಿದೆ.

ಕುಶಾಲನಗರ ತಾಲೂಕಿನ ಕೂಡ್ಲೂರು ಕೈಗಾರಿಕಾ ಬಡಾವಣೆಯಲ್ಲಿ ಕಾಲುವೆ ಮತ್ತು ರಸ್ತೆಯ ನೀರು ಕೆಲವು ಅಂಗಡಿಗಳು, ಸಾಮಿಲ್ ಮತ್ತು ಕೆಲವು ಮನೆಗಳಿಗೆ ನುಗ್ಗಿದೆ. ಭಾರೀ ನೀರು ನುಗ್ಗಿದ ಪರಿಣಾಮ ಸಾಮಿಲ್ನಲ್ಲಿ ಸಂಗ್ರಹಿಸಿಟ್ಟಿದ್ದ ಅಪಾರ ಪ್ರಮಾಣದ  ಮರಗಳು ನೀರಿನಲ್ಲಿ ನೆನೆದು ಹೋಗಿವೆ.

- Advertisement -

ಕುಶಾಲನಗರ ಸಮೀಪದ ಕೊಪ್ಪದಿಂದ ಬೈಲುಕೊಪ್ಪದ ಟಿಬೆಟಿಯನ್ ಧರ್ಮಶಾಲಾಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ರಸ್ತೆಯ ಪರ್ಯಾಯ ಸೇತುವೆ ಮಳೆಗೆ ಸಂಪೂರ್ಣ ಕೊಚ್ಚಿ ಹೋಗಿದೆ. ಇದರಿಂದ ಕೊಪ್ಪ, ಟಿಬೆಟಿಯನ್ ಧರ್ಮಶಾಲಾ ಮತ್ತು ಮರಡಿಯೂರು ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ. ಈ ಗ್ರಾಮಗಳ ಜನರು ಬೈಲುಕುಪ್ಪೆ ಮಾರ್ಗವಾಗಿ ಸುತ್ತಿ ಬಳಸಿ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಕೊಪ್ಪ ಮತ್ತು ಟಿಬೆಟಿಯನ್ ಕ್ಯಾಂಪ್ ನಡುವೆ ಸಂಪರ್ಕ ಕಲ್ಪಿಸುವ ಶಾಶ್ವತ ಸೇತುವೆ ನಿರ್ಮಾಣ ಕಾಮಗಾರಿ ಆಗುತ್ತಿದ್ದರಿಂದ ಬದಲೀ ಮಾರ್ಗವಾಗಿ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿತ್ತು. ಆದರೆ ಬುಧವಾರ ಸುರಿದ ಭಾರೀ ಮಳೆಗೆ ತಾತ್ಕಾಲಿಕ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿದೆ. ಸದ್ಯ ಸೇತುವೆ ಕೊಚ್ಚಿ ಹೋದ ಸ್ಥಳದಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ಜನರು ಅತ್ತ ಧಾವಿಸದಂತೆ ಸಂಚಾರ ನಿರ್ಬಂಧಿಸಲಾಗಿದೆ.



Join Whatsapp