ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಸಹೋದರನ ವಿರುದ್ಧ ಎಫ್ಐಆರ್

Prasthutha|

ಬೆಂಗಳೂರು : ಪತ್ನಿಗೆ ಕಿರುಕುಳ ನೀಡಿದ ಆರೋಪದಲ್ಲಿ ಐಪಿಎಸ್ ಅಧಿಕಾರಿ ರವಿ ಡಿ. ಚೆನ್ನಣ್ಣನವರ್ ಸಹೋದರ ರಾಘವೇಂದ್ರ ಚನ್ನಣ್ಣನವರ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. 2015 ರಲ್ಲಿ ರೋಜಾ ಮತ್ತು ರಾಘವೇಂದ್ರ ಚನ್ನಣ್ಣನವರ್ ಮದುವೆಯಾಗಿದ್ದರು.

- Advertisement -

ರೋಜಾ ಮದುವೆಗೂ ಮುನ್ನ ಮತ್ತೊಬ್ಬ ಮಹಿಳೆಯೊಂದಿಗೆ ರಾಘವೇಂದ್ರ ಮದುವೆಯಾಗಿದ್ದು, ಈ ವಿಷಯವನ್ನು ಮುಚ್ಚಿಟ್ಟಿದ್ದರು ಎನ್ನಲಾಗಿದೆ.

- Advertisement -

ಈಗ ಮದುವೆಯಾದ ಒಂದೇ ವರ್ಷದಲ್ಲಿ ಅವರನ್ನು ಬಿಟ್ಟಿದ್ದು, ಮೊದಲು ಮದುವೆಯಾಗಿದ್ದ ಮಹಿಳೆಯೊಂದಿಗೆ ಸಂಸಾರ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದ್ದು, ಬೆಂಗಳೂರಿನ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ರಾಘವೇಂದ್ರ ಡಿ ಚನ್ನಣ್ಣನವರ್ ವಿರುದ್ಧ ಎಫ್ ಆರ್ ದಾಖಲಾಗಿದೆ. 2015 ರಲ್ಲಿ ರೋಜಾ ಮತ್ತು ರಾಘವೇಂದ್ರ ಚನ್ನಣ್ಣನವರ್ ಮದುವೆಯಾಗಿದ್ದು, ರವಿ ಚೆನ್ನಣ್ಣನವರ್ ಮುಂದೆ ನಿಂತು ಮದುವೆ ಮಾಡಿಸಿದ್ದರು. ಆದರೆ ಈ ವಿಷಯ ರವಿ ಚೆನ್ನಣ್ಣನವರ್ ಮುಂದೆ ಹೇಳಿದಾಗ ಮುಂದೆ ಎಲ್ಲ ಸರಿಹೋಗುತ್ತದೆ. ನೀನು ಉನ್ನತ ಶಿಕ್ಷಣದ ಕಡೆ ಗಮನ ಹರಿಸು ಎಂದು ಹೇಳಿದ್ದರೆಂದು ರೋಜಾ ದೂರು ನೀಡಿದ್ದಾರೆ



Join Whatsapp