ಹೆಡ್ಗೇವಾರ್ ಪಠ್ಯದಿಂದ ದ್ವೇಷವನ್ನಷ್ಟೇ ಕಲಿಯಲು ಸಾಧ್ಯ | ಭಗತ್ ಸಿಂಗ್ ಪಠ್ಯ ಕೈ ಬಿಟ್ಟಿದ್ದಕ್ಕೆ ಸಿದ್ದರಾಮಯ್ಯ ಆಕ್ರೋಶ

Prasthutha|

ಬೆಂಗಳೂರು: ಸರ್ಕಾರ ಭ್ರಷ್ಟಾಚಾರವನ್ನು ಬೆಂಬಲಿಸುತ್ತಾ ಇದ್ದರೆ, ಸರ್ಕಾರ ಮಾನಗೆಟ್ಟು ನಿಂತಿದ್ದರೆ ನಾವು ಎಷ್ಟೇ ನ್ಯಾಯಕ್ಕಾಗಿ ಕೂಗಾಡಿದರೂ ಅದರಿಂದ ಪ್ರಯೋಜನವಾಗಲ್ಲ. ಹಾಗಾಗಿ ನ್ಯಾಯಾಲಯದಲ್ಲಿ ಹೋರಾಟ ಮಾಡುವ ಅವಕಾಶಗಳ ಬಗ್ಗೆಯೂ ಯೋಚನೆ ಮಾಡುತ್ತೇವೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -

ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರ ಕಮಿಷನ್‌ ಹಗರಣದ ಬಗ್ಗೆ ಕ್ರಮ ಕೈಗೊಳ್ಳದೆ ಹೋದರೆ ನಾವು ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದಾಗಿ ಈ ಹಿಂದೆ ಕೆಂಪಣ್ಣನವರು ಹೇಳಿದ್ದರು. ಆದರೆ ಈಗ ಕೆಂಪಣ್ಣನವರು ಮುಖ್ಯಮಂತ್ರಿಗಳ ಜೊತೆ ಒಳ ಒಪ್ಪಂದ ಮಾಡಿಕೊಂಡು ಸುಮ್ಮನಾಗಿದ್ದಾರೆ. ಆದರೆ ಅವರು ಪ್ರಧಾನಿಗಳಿಗೆ ಬರೆದ ಪತ್ರ ಸುಳ್ಳಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ

ನನಗೆ ವರ್ಮಾ ಎನ್ನುವವರು ವಾಚ್‌ ಗಿಫ್ಟ್‌ ಕೊಟ್ಟಿದ್ದರು, ನಾನು ಅದಕ್ಕೆ ಗಿಫ್ಟ್‌ ಟ್ಯಾಕ್ಸ್‌ ಕಟ್ಟಿ ಎ.ಸಿ.ಬಿ ಗೆ ರೆಫರ್‌ ಮಾಡಿದ್ದೆ, ವರ್ಮಾ ಅವರು ದುಬೈನಲ್ಲಿ ಖರೀದಿ ಮಾಡಿದ ಬಿಲ್‌ ಹಾಜರು ಪಡಿಸಿ, ವಾಚ್‌ ನಾನೇ ಕೊಟ್ಟಿದ್ದು ಎಂದು ಅಫಿಡವಿಟ್‌ ಸಲ್ಲಿಸಿದ್ದರು. ಇಷ್ಟೆಲ್ಲಾ ಆದಮೇಲೆ ಆ ವಾಚಿನ ಸಹವಾಸವೇ ಬೇಡ ಎಂದು ಸರ್ಕಾರಕ್ಕೆ ಕೊಟ್ಟಿದ್ದೀನಿ ಎಂದು ಸಿದ್ದರಾಮಯ್ಯ ತಿಳಿಸಿದರು.

- Advertisement -

ಇನ್ನು ಪಠ್ಯಪುಸ್ತಕದಿಂದ ಭಗತ್‌ ಸಿಂಗ್‌ ಅಧ್ಯಾಯ ಕೈ ಬಿಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಭಗತ್ ಸಿಂಗ್ ಓರ್ವ ಅಪ್ಪಟ ದೇಶಭಕ್ತ. ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಬೆಳೆಸಬೇಕು. ಭಗತ್‌ ಸಿಂಗ್‌ ರಂಥವರ ಬಗ್ಗೆ ಓದಿದರೆ ಮಕ್ಕಳಿಗೆ ದೇಶಾಭಿಮಾನ, ಸ್ಪೂರ್ತಿ ಬರುತ್ತದೆ. ಇವರ ಬಗೆಗಿನ ಪಾಠ ತೆಗೆದು ಹೆಡ್ಗೇವಾರ್‌ ಅವರ ಬಗ್ಗೆ ಪಾಠ ಸೇರಿಸಿದರೆ ಏನು  ಉಪಯೋಗ? ದೇಶಕ್ಕೆ ಹೆಡ್ಗೇವಾರ್‌  ಕೊಡುಗೆ ಏನು? ಜಾತೀಯತೆ ಪ್ರಚಾರ ಮಾಡಿದ್ದು, RSS ಹುಟ್ಟುಹಾಕಿದ್ದು, ಹಿಂದುತ್ವ ಪ್ರಚಾರ ಮಾಡಿದ್ದು ಇವು ಹೆಡ್ಗೇವಾರ್‌ ಮಾಡಿದ್ದು. ಅವರು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರ? ಅವರು ಮಾತನಾಡಿರುವುದು ಬರೀ ದ್ವೇಷ ಭಾವನೆ ಬೆಳೆಸುವಂತವು, ಇವರ ಭಾಷಣ ಕೇಳಿ ವಿದ್ಯಾರ್ಥಿಗಳು ಏನು ಕಲಿಯುತ್ತಾರೆ? ದ್ವೇಷವನ್ನು ಅಲ್ಲವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು

ಪಠ್ಯಕ್ರಮದಿಂದ ಭಗತ್‌ ಸಿಂಗ್‌ ಪಾಠ ಕೈಬಿಟ್ಟಿದ್ದರೆ ಕೂಡಲೇ ಸೇರಿಸಬೇಕು. ಯಾವುದೇ ಕಾರಣಕ್ಕೂ ಹೆಡ್ಗೆವಾರ್‌ ಜೀವನ, ವ್ಯಕ್ತಿತ್ವದ ಪಾಠವನ್ನು ಸೇರಿಸಬಾರದು ಎಂದು ಸರಕಾರವನ್ನು ಆಗ್ರಹಿಸಿದರು.



Join Whatsapp