ರಾಜೀವ್ ಗಾಂಧಿ ಹಂತಕ ಬಿಡುಗಡೆ | ಒಕ್ಕೂಟ ವ್ಯವಸ್ಥೆ, ರಾಜ್ಯ ಸ್ವಾಯತ್ತತೆಯ ವಿಜಯ: ಸಿಎಂ ಸ್ಟಾಲಿನ್

Prasthutha|

ಚೆನ್ನೈ: ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಹಂತಕ ಪೆರಾರಿವಾಲನ್ ನನ್ನು ಸುಪ್ರೀಮ್ ಕೋರ್ಟ್ ಬಿಡುಗಡೆಗೊಳಿಸಿದ್ದನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸ್ವಾಗತಿಸಿದ್ದಾರೆ.

- Advertisement -

“ಇದು ಕೇವಲ ಒಬ್ಬ ವ್ಯಕ್ತಿಯ ವಿಜಯವಲ್ಲ. ಇದು ದೇಶದ ಒಕ್ಕೂಟ ವ್ಯವಸ್ಥೆ ಮತ್ತು ರಾಜ್ಯಗಳ ಸ್ವಾಯತ್ತತೆಯ ವಿಜಯ” ಎಂದು ಬಣ್ಣಿಸಿದ್ದಾರೆ.

31 ವರ್ಷಗಳ ಯೌವನವನ್ನು ಜೈಲಿನಲ್ಲಿ ಕಳೆದ ಪೆರಾರಿವಾಲನ್ ಅವರಿಗೆ ಕೊನೆಗೂ ಸ್ವಾತಂತ್ರ್ಯ ಲಭಿಸಿದೆ ಎಂದು ಸ್ಟಾಲಿನ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಾನು ಅವರಿಗೆ ಈ ಸಂದರ್ಭದಲ್ಲಿ ಶುಭಾಶಯಗಳನ್ನು ಸಲ್ಲಿಸುತ್ತೇನೆ ಮತ್ತು ಸ್ವಾಗತಿಸುತ್ತೇನೆ ಎಂದು ತಿಳಿಸಿದ್ದಾರೆ.

- Advertisement -

ಪೆರಾರಿವಾಲನ್ ಬಿಡುಗಡೆಗೆ ಅವರ ತಾಯಿ ಅರ್ಪುತಮ್ಮಳ್ ಸುದೀರ್ಘವಾಗಿ ನಡೆಸಿದ ಹೋರಾಟವನ್ನು ಶ್ಲಾಘಿಸಿದ ಸ್ಟಾಲಿನ್, “ಆಕೆ ತನ್ನ ತಾಯ್ತನದ ಸಾರವನ್ನು ಸಾಬೀತುಪಡಿಸಿದ್ದಾರೆ. ಒಂದು ನಿಜವಾದ ಕಣ್ಣೀರಿಗೂ ನ್ಯಾಯವಿದೆ ಎಂದು ಈ ಘಟನೆ ಸಾಬೀತುಪಡಿಸಿದೆ. ನಾನು ಆಕೆಗೂ ಅಭಿನಂದನೆ ಸಲ್ಲಿಸುತ್ತೇನೆ” ಎಂದು ಅವರು ತಿಳಿಸಿದ್ದಾರೆ.



Join Whatsapp