ಭಾರತದಲ್ಲಿ ಮಾಂಸಾಹಾರ ಹೆಚ್ಚಳ: ಸಮೀಕ್ಷೆಯಿಂದ ಬಹಿರಂಗ

Prasthutha|

ನವದೆಹಲಿ: ಭಾರತೀಯರು ಹಿಂದೆಂದಿಗಿಂತಲೂ ಅಧಿಕ ಮಾಂಸಾಹಾರವನ್ನು ಸೇವಿಸುತ್ತಾರೆ ಎಂಬುದು ಇತ್ತೀಚೆಗೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ನಡೆಸಿದ ಅಂಕಿಅಂಶಗಳಿಂದ ಬಹಿರಂಗವಾಗಿದೆ.

- Advertisement -

ದೇಶದಲ್ಲೆ 15-49 ವಯೋಮಾನದ ಶೇಕಡಾ 83.4 ರಷ್ಟು ಪುರುಷರು ಮತ್ತು ಶೇಕಡಾ 70.6 ರಷ್ಟು ಮಹಿಳೆಯರು ಮಾಂಸಾಹಾರವನ್ನು ಪ್ರತಿದಿನ, ವಾರಕ್ಕೊಮ್ಮೆ ಅಥವಾ ಸಾಂದರ್ಭಿಕವಾಗಿ ಸೇವಿಸುತ್ತಾರೆ ಎಂದು NFHS ಸಂಸ್ಥೆ ನಡೆಸಿದ ವಿಶ್ಲೇಷಣೆ ಬಹಿರಂಗಪಡಿಸಿದೆ.

2015–16 ಮತ್ತು 2019–21 ರ ನಡುವಿನ ಆರು ವರ್ಷಗಳಲ್ಲಿ ಮಾಂಸಾಹಾರವನ್ನು ಸೇವಿಸುವ ಭಾರತೀಯ ಪುರುಷರ ಪ್ರಮಾಣವು ತೀವ್ರವಾಗಿ ವೃದ್ಧಿಸಿದೆ.

- Advertisement -

ಈ ಹಿಂದಿನ ಸಾಲಿನ ಸಮೀಕ್ಷೆಯಲ್ಲಿ ದೇಶದ 78.4% ಪುರುಷರು ಮಾಂಸಾಹಾರವನ್ನು ಪ್ರತಿದಿನ, ವಾರಕ್ಕೊಮ್ಮೆ ಅಥವಾ ಸಾಂದರ್ಭಿಕವಾಗಿ ಸೇವಿಸುತ್ತಾರೆ ಎಂದು ತಿಳಿದು ಬಂದಿತ್ತು.

ಈ ಮಧ್ಯೆ ವಾರಕ್ಕೊಮ್ಮೆ ಮಾಂಸ ತಿನ್ನುವವರ ಪ್ರಮಾಣವು ತೀವ್ರವಾಗಿ ಏರಿಕೆಯಾಗಿದೆ.

57.3 ಶೇಕಡಾ ಪುರುಷರು, 45.1 ಶೇಕಡಾ ಮಹಿಳೆಯರು ಕನಿಷ್ಠ ವಾರಕ್ಕೊಮ್ಮೆ ಮೀನು, ಕೋಳಿ ಅಥವಾ ಮಾಂಸವನ್ನು ಸೇವಿಸುತ್ತಾರೆ.

2019–21 ರ ಸಾಲಿನ ರಾಜ್ಯವಾರು ಮಾಂಸಾಹಾರವನ್ನು ಸೇವಿಸುವ ಪುರುಷರ ವಿವರ ಇಂತಿವೆ.

ಲಕ್ಷದ್ವೀಪ ಅತೀ ಹೆಚ್ಚು (98.4%), ಅತೀ ಕಡಿಮೆ (14.1%) ಆಗಿದ್ದು, ಅಗ್ರ ಪಟ್ಟಿಯಲ್ಲಿನ ಇತರೆ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ (96.1%), ಕೇರಳ (90.1%) ಮತ್ತು ಪುದುಚೇರಿ (89.9%) ಎಂಬುದು ಅಂಕಿಅಂಶಗಳಿಂದ ಬಹಿರಂಗವಾಗಿವೆ.

15-49 ವಯಸ್ಸಿನ ಕ್ರಿಶ್ಚಿಯನ್ ಪುರುಷರು ಮತ್ತು ಮಹಿಳೆಯರು ಮಾಂಸಾಹಾರವನ್ನು ಅತಿ ಹೆಚ್ಚು ಅಂದರೆ 80 ಶೇಕಡಾ ಪುರುಷರು ಮತ್ತು 78% ಮಹಿಳೆಯರು ಬಳಸುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.

15-49 ವಯೋಮಾನದ ಮುಸ್ಲಿಂ ಪುರುಷರು ಮತ್ತು ಮಹಿಳೆಯರು ಮಾಂಸಾಹಾರಿ ಆಹಾರದ ಎರಡನೇ ಅತಿ ಹೆಚ್ಚು ಅಂದರೆ 79.5 % ಪುರುಷರು ಮತ್ತು 70.2 % ಮಹಿಳೆಯರು ಬಳಕೆ ಮಾಡುತ್ತಾರೆ ಎಂದು ಬಹಿರಂಗಗೊಂಡಿದೆ.

ಇನ್ನು ಮಾಂಸಾಹಾರ ಸೇವಿಸುವ ಇತರೆ ಧಾರ್ಮಿಕ ಗುಂಪುಗಳ ವಿವರ ಹೀಗಿವೆ.

ಹಿಂದೂ ಪುರುಷರು: 52.5%, ಮಹಿಳೆಯರು: 40.7%; ಸಿಖ್ ಪುರುಷರು: 19.5%, ಮಹಿಳೆಯರು: 7.9%; ಬೌದ್ಧ/ನವ-ಬೌದ್ಧ ಪುರುಷರು: 74.1%, ಮಹಿಳೆಯರು: 62.2%; ಮತ್ತು ಜೈನ ಪುರುಷರು 14.9%, ಮಹಿಳೆಯರು: 4.3% ಎಂದು ತಿಳಿದು ಬಂದಿದೆ.



Join Whatsapp