ಹೊಸದಿಲ್ಲಿ: ಕುತುಬ್ ಮಿನಾರ್ ಸಂಕೀರ್ಣದಲ್ಲಿ 27 ಹಿಂದೂ ಹಾಗೂ ಜೈನ ದೇವಾಲಯಗಳನ್ನು ಮರು ಸ್ಥಾಪಿಸುವ ಬಗ್ಗೆ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಸಾಕೇತ್ ನ್ಯಾಯಾಲಯವು ಮೇ 24 ಕ್ಕೆ ಮುಂದೂಡಿದೆ.
ಕುತುಬ್ ಮಿನಾರ್ ಸಂಕೀರ್ಣದ ಒಳಗಿರುವ ಖುವ್ವತುಲ್ ಇಸ್ಲಾಂ ಮಸೀದಿಯು ದೇವಾಲಯವಿದ್ದ ಸ್ಥಳದಲ್ಲಿ ನಿರ್ಮಿಸಲ್ಪಟ್ಟಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
27 ಕ್ಕೂ ಮಿಕ್ಕ ದೇವಾಲಯಗಳನ್ನು ಒಳಗೊಂಡಿರುವ ಕಟ್ಟಡವನ್ನು ಮರುಸ್ಥಾಪಿಸುವಂತೆ ಕೋರಿ, ಜೈನರ ವೃಷಭ ದೇವ ಮತ್ತು ಹಿಂದೂಗಳ ದೇವರು ವಿಷ್ಣುವಿನ ಪರವಾಗಿ ಮನವಿ ಸಲ್ಲಿಸಲಾಗಿದೆ.