ನಾನು ಷಡ್ಯಂತ್ರಕ್ಕೆ ಒಳಗಾಗಿದ್ದೇನೆ: ಮಾಧ್ಯಮದ ಎದುರು ಅಳಲು ತೋಡಿಕೊಂಡ ಜ್ಞಾನವಾಪಿ ಮಸೀದಿ ಚಿತ್ರೀಕರಣದ ನೇತೃತ್ವ ವಹಿಸಿದ್ದ ಅಧಿಕಾರಿ

Prasthutha|

ನವದೆಹಲಿ: ನೂತನ ಅಡ್ವೊಕೇಟ್ ಕಮಿಷನರ್ ವಿಶಾಲ್ ಸಿಂಗ್ ಎಂಬವರು ತನ್ನ ವಿರುದ್ಧ ಷಡ್ಯಂತ್ರ್ಯ ರೂಪಿಸಿ ನನ್ನನ್ನು ಜ್ಞಾನವಾಪಿ ಮಸೀದಿ ಸಮೀಕ್ಷಾ ಆಯುಕ್ತ ಸ್ಥಾಮದಿಂದ ವಜಾಗೊಳಿಸುವಂತೆ ಮಾಡಿದ್ದಾರೆ ಎಂದು ನಿರ್ಗಮಿತ ಆಯುಕ್ತ ಅಜಯ್ ಮಿಶ್ರಾ ಅವರು ಮಾಧ್ಯಮದ ಎದುರು ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

- Advertisement -

ಜ್ಞಾನವಾಪಿ ಮಸೀದಿ ಸಂಕೀರ್ಣದ ಚಿತ್ರೀಕರಣದ ನೇತೃತ್ವದ ಉನ್ನತ ಅಧಿಕಾರಿಯನ್ನು ವಾರಣಾಸಿಯ ನ್ಯಾಯಾಲಯವು, ಸಮೀಕ್ಷೆಯ ಮಾಹಿತಿ ಸೋರಿಕೆಯಾದ ಆರೋಪದಲ್ಲಿ ಇಂದು ವಜಾಗೊಳಿಸಿದೆ.

ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, “ನಾನೇನೂ ತಪ್ಪು ಮಾಡಿಲ್ಲ. ವಿಶಾಲ್ ಸಿಂಗ್ ನನಗೆ ದ್ರೋಹ ಬಗೆದಿದ್ದಾರೆ. ನನ್ನ ನಂಬಿಕೆಯ ಸ್ವಭಾವದ ಲಾಭವನ್ನು ಅವರು ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

- Advertisement -

“ನಾವು ಕಳೆದ ರಾತ್ರಿ 12 ಗಂಟೆಯವರೆಗೆ ಒಟ್ಟಾಗಿ ವರದಿಯನ್ನು ಸಿದ್ಧಪಡಿಸಿದ್ದೇವೆ. ವಿಶಾಲ್ ಸಿಂಗ್ ನನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆಂದು ನನಗೆ ತಿಳಿದಿರಲಿಲ್ಲ. ಈ ಬಗ್ಗೆ ನನಗೆ ನಿಜವಾಗಿಯೂ ದುಃಖವಾಗಿದೆ. ನಾನು ಪಕ್ಷಪಾತ ಮಾಡಿಲ್ಲ. ನಾನು ಸಮೀಕ್ಷೆಯ ಬಗ್ಗೆ ಏನನ್ನೂ ಹೇಳುವುದಿಲ್ಲ” ಎಂದು ಅವರು ತಿಳಿಸಿದ್ದಾರೆ.



Join Whatsapp