ಟ್ವಿಟರ್ ನ ಬ್ಲೂಟಿಕ್ ಗಾಗಿ 10 ಸಾವಿರ ರೂ. ದಂಡ ಕಟ್ಟಿದ ಸಿಬಿಐ ಮಾಜಿ ಮುಖ್ಯಸ್ಥ

Prasthutha|

ನವದೆಹಲಿ: ಟ್ವಿಟರ್ ನ ಬ್ಲೂಟಿಕ್ ಗಾಗಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಸಿಬಿಐ ಮಾಜಿ ಮುಖ್ಯಸ್ಥ ಎಂ.ನಾಗೇಶ್ವರ ರಾವ್ ಅವರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿದೆ.

- Advertisement -

ಟ್ವಿಟರ್ ನಲ್ಲಿ ಬ್ಲೂಟಿಕ್ ಬಳಕೆದಾರರ ಖಾತೆಗೆ ಅಧಿಕೃತ ಮುದ್ರೆಯಾಗಿದೆ. ಆದರೆ, ಇದನ್ನು ತೆಗೆದು ಹಾಕಿದ್ದರಿಂದ ಟ್ವಿಟರ್ ವಿರುದ್ಧ ಎಂ.ನಾಗೇಶ್ವರರಾವ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, ನ್ಯಾ.ಯಶ್ವಂತ ವರ್ಮಾ ಅವರಿದ್ದ ಏಕಸದಸ್ಯ ಪೀಠ, ಈ ವಿಷಯ ಕುರಿತು ಈ ಹಿಂದೆ ಆದೇಶಿಸಲಾಗಿದೆ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.

ಏಪ್ರಿಲ್ 7ರಂದೇ ಆದೇಶ ನೀಡಿದ್ದೇವೆ. ಆ ತಕ್ಷಣ ನ್ಯಾಯಾಲಯವನ್ನು ಸಂಪರ್ಕಿಸಲು ಯಾವ ನಿರ್ಬಂಧವಿತ್ತು? ನಮ್ಮಿಂದ ಮರಳಿ ಉಡುಗೊರೆ ಬೇಕೇ ಎಂದು ಖಾರವಾಗಿ ಪ್ರಶ್ನಿಸಿರುವ ನ್ಯಾಯಪೀಠ, 10 ಸಾವಿರ ರೂಪಾಯಿ ದಂಡ ವಿಧಿಸಿದೆ.

- Advertisement -

ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲ ರಾಘವ್ ಅವಸ್ಥಿ, ಬ್ಲೂಟಿಕ್ಗಾಗಿ ಕಳೆದ ತಿಂಗಳೇ ಮನವಿ ಮಾಡಲಾಗಿತ್ತು. ಆದರೆ, ಇದುವರೆಗೆ ಟ್ವಿಟರ್ ನವರು ಇದನ್ನು ನೀಡಿಲ್ಲ ಎಂದು ಹೇಳಿದ್ದರು.



Join Whatsapp