ಮಂಡ್ಯ : ಋಷಿಕುಮಾರ ಸ್ವಾಮಿಯ ಪಾದೆಯಾತ್ರೆಯನ್ನು ವಿರೋಧಿಸಿ ಇಂದು ನಗರದಲ್ಲಿ ನಡೆದ ರೈತ ಸಂಘರ್ಷ ಸಮಿತಿ ಏರ್ಪಡಿಸಿದ ಪ್ರತಿಭಟನೆಯಲ್ಲಿ ಮಾತಾಡಿದ ಜಗದೀಶ್ ಕೊಪ್ಪ, ಕಾಳಿ ಸ್ವಾಮಿ ಮೊನ್ನೆ ಮೊನ್ನೆ ಅಲ್ಲೆಲ್ಲೋ ಚಡ್ಡಿ ಬಿಚ್ಚಿ ಕುಣಿಯುತ್ತಿದ್ದ ಮೂರನೇ ದರ್ಜೆಯ ಹಲಾಲ್ ಕೋರ ಎಂದು ತೀವ್ರ ವಾಗ್ದಾಳಿ ಮಾಡಿದ್ದಾರೆ.
ಪ್ರತಿಭಟನೆಯಲ್ಲಿ ಮಾತಾಡಿದ ಜಗದೀಶ್, ಮಂಡ್ಯದಲ್ಲಿ ಪಾದಯಾತ್ರೆ ಮಾಡಲು ಅವನಿಗೆ ಅರ್ಹತೆ ಏನಿದೆ, ಖಾವಿ ಧರಿಸಿದವರೆಲ್ಲರೂ ಸ್ವಾಮೀಜಿ ಆಗಲು ಸಾಧ್ಯವಿಲ್ಲ. ಇಂತಹವರಿಗಿಂತ ಘನತೆಯ ಬದುಕನ್ನು ಜಿಲ್ಲೆಯ ರೈತರು ,ಕೃಷಿಕರು ಮತ್ತು ಜನರು ಬದುಕುತ್ತಿದ್ದಾರೆ ಎಂದು ಖಾರವಾಗಿ ನುಡಿದಿದ್ದಾರೆ.
ಮುತಾಲಿಕ್ ಮತ್ತು ಕಾಳಿ ಸ್ವಾಮಿಗೆ ಮಂಡ್ಯ ಜಿಲ್ಲೆಯ ಇತಿಹಾಸವೇನು ಗೊತ್ತೇ ,ಇಲ್ಲಿನ ಸಾಂಸ್ಕ್ರತಿಕ ,ಐತಿಹಾಸಿಕತೆಯ ಬಗ್ಗೆ ಏನಾದರೂ ಗೊತ್ತೇ ಎಂದು ಪ್ರಶ್ನಿಸಿದ ಜಗದೀಶ್, ಅನಾವಶ್ಯಕವಾಗಿ ನಮ್ಮ ಜಿಲ್ಲೆಗೆ ಬೆಂಕಿಯಿಡಲು ಬರಬೇಡಿ. ನಾವದನ್ನು ಸಹಿಸೋದಿಲ್ಲ ಎಂದು ಎಚ್ಚರಿಸಿದ್ಧಾರೆ.