ಕೊಲಂಬೊ: ಶ್ರೀಲಂಕಾದ ಹೊಸ ಸರ್ಕಾರವು ರಾಷ್ಟ್ರೀಯ ವಿಮಾನಯಾನ ಸಂಸ್ಥೆಯನ್ನು ನಷ್ಟದಿಂದ ತಡೆಯಲು ಮಾರಾಟ ಮಾಡಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಹಲವು ನೌಕರರ ವೇತನ ಪಾವತಿಸುವ ಸಲುವಾಗಿ ಹಣವನ್ನು ಮುದ್ರಿಸುವ ಮೂಲಕ ರಾಷ್ಟ್ರದ ಆರ್ಥಕತೆ ಸ್ಥಿರಗೊಳಿಸುವ ವ್ಯವಸ್ಥೆಯ ಭಾಗವಾಗಿದೆ ಎಂದು ತಿಳಿದು ಬಂದಿದೆ.
ಹೊಸ ಆಡಳಿತವು ಶ್ರೀಲಂಕಾ ಏರ್ಲೈನ್ಸ್ ಅನ್ನು ಖಾಸಗೀಕರಣಗೊಳಿಸಲು ಯೋಜಿಸಿದೆ ಎಂದು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಸೋಮವಾರ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದರು. ಕಳೆದ ವರ್ಷದ ಮಾರ್ಚ್ ಅಂತ್ಯಕ್ಕೆ ವಿಮಾನಯಾನ ಸಂಸ್ಥೆಯು ಒಟ್ಟು 45ಬಿಲಿಯನ್ ಡಾಲರ್ ಗಳಷ್ಟು ನಷ್ಟಕ್ಕೀಡಾಗಿದೆ ಎಂದು ಅವರು ಮಾಹಿತಿ ನೀಡಿದರು. ವಿಮಾನದಲ್ಲಿ ಕಾಲಿಡದ ಬಡವರಲ್ಲಿ ಈ ನಷ್ಟವನ್ನು ಭರಿಸಬಾರದು ಎಂದು ವಿಕ್ರಮಸಿಂಘೆ ಹೇಳಿದರು.
ಟ್ವಿಟರ್ ಮೂಲಕ ನಿನ್ನೆಯಷ್ಟೇ ಅವರು ದೇಶದಲ್ಲಿ ಒಂದು ದಿನಕ್ಕಾಗುವಷ್ಟು ಮಟ್ಟಿಗೆ ಮಾತ್ರ ಗ್ಯಾಸೋಲಿನ್ ಶೇಖರಣೆಯಿದ್ದು, ಮುಂದಿನ ಒಂದೆರಡು ತಿಂಗಳು ನಾಗರಿಕರ ಪರಿಸ್ಥಿತಿ ಶೋಚನೀಯವಾಗಿರಲಿದೆ ಎಂದು ದೇಶವು ಅನುಭವಿಸುತ್ತಿರುವ ದುಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದರು.