ರಷ್ಯಾ- ಉಕ್ರೇನ್ ಯುದ್ಧ; ಅಸ್ತಿತ್ವ ಕಳೆದುಕೊಳ್ಳಲಿದೆಯೇ ರಷ್ಯಾ…?

Prasthutha|

ಲಂಡನ್: ಉಕ್ರೇನ್ ಮೇಲಿನ ದಾಳಿಯಲ್ಲಿ ರಷ್ಯಾವು ತನ್ನ ಭೂಸೇನೆಯ ಮೂರನೇ ಒಂದರಷ್ಟು ಭಾಗವನ್ನು ಕಳೆದುಕೊಂಡಿದ್ದು, ಡಾನ್‌ಬಸ್ ಪ್ರದೇಶದ ಮೇಲಿನ ದಾಳಿ ನಿಗದಿತ ಕಾಲಾವಧಿಗಿಂತ ತೀರಾ ಹಿಂದೆ ಬಿದ್ದಿದೆ. ಮುಂದಿನ 30 ದಿನಗಳವರೆಗೆ ರಷ್ಯಾ ತನ್ನ ದಾಳಿ ವೇಗವನ್ನು ತೀವ್ರಗೊಳಿಸಿ, ಮುನ್ನಡೆ ಸಾಧಿಸುವುದು ಅಸಾಧ್ಯ ಎಂದು ಬ್ರಿಟಿಷ್ ಗುಪ್ತಚರ ಸಂಸ್ಥೆಯೊಂದು ವರದಿ ಮಾಡಿದೆ.

- Advertisement -


ಈ ಮಧ್ಯೆ ನ್ಯಾಟೊ ಮೈತ್ರಿಕೂಟ ಉಕ್ರೇನ್‌ಗೆ ಮಿಲಿಟರಿ ನೆರವನ್ನು ಮುಂದುವರಿಸಲಿದ್ದು, ರಷ್ಯಾ ವಿರುದ್ಧದ ಯುದ್ಧವನ್ನು ಉಕ್ರೇನ್ ಗೆಲ್ಲುತ್ತದೆ ಎಂದು ನ್ಯಾಟೊ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೊಲೆಟ್‌ಬರ್ಗ್ ಹೇಳಿದ್ದಾರೆ.


ಉಕ್ರೇನ್ ಮೇಲಿನ ರಷ್ಯಾ ದಾಳಿಯ ಹಿನ್ನೆಲೆಯಲ್ಲಿ, ದಶಕದ ವಿರೋಧವನ್ನು ಲೆಕ್ಕಿಸದೇ ಸದಸ್ಯತ್ವ ಪಡೆಯುವ ಮೂಲಕ ನ್ಯಾಟೊ ಕೂಟವನ್ನು ಸೇರುವ ಮಹತ್ವದ ನಿರ್ಧಾರವನ್ನು ಕೈಗೊಂಡಿರುವ ಸ್ವೀಡನ್ ಗೆ ಪಾರ್ಲಿಮೆಂಟ್‌ನಲ್ಲಿ ಭಾರಿ ಬಹುಮತದೊಂದಿಗೆ ಅಂಗೀಕಾರ ನೀಡಲಾಗಿದೆ.
ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿರುವ ಫಿನ್ಲೆಂಡ್ ಮತ್ತು ಸ್ವೀಡನ್‌ಗೆ ಅರ್ಜಿ ಆಂಗೀಕಾರವಾಗುವರೆಗಿನ ಮಧ್ಯಂತರ ಅವಧಿಯಲ್ಲಿ ಭದ್ರತಾ ಖಾತರಿ ನೀಡುವ ಬಗ್ಗೆ ಪರಿಶೀಲನೆ ನಡೆದಿದೆ ಎಂದು ನ್ಯಾಟೋ ಮುಖ್ಯಸ್ಥ ಜೇನ್ಸ್ ಸ್ಟೊಲೆಟ್‌ಬರ್ಗ್ ಸ್ಪಷ್ಟಪಡಿಸಿದ್ದಾರೆ.

- Advertisement -



Join Whatsapp