ಟಿಪ್ಪು ಮಸೀದಿ ವಿರುದ್ಧವೂ ಹಿಂದುತ್ವ ಸಂಘಟನೆಯ ಕೆಂಗಣ್ಣು | ಹಿಂದೂಗಳಿಗೆ ಹಸ್ತಾಂತರಿಸುವಂತೆ ಒತ್ತಾಯ

Prasthutha|

ಮಂಡ್ಯ: ರಾಜ್ಯದ ಹಲವೆಡೆ ಮಸೀದಿಗಳನ್ನು ದೇವಸ್ಥಾನದ ಮೇಲೆ ಕಟ್ಟಲಾಗಿದೆ ಎಂದು ವದಂತಿ ಹಬ್ಬಿಸುತ್ತಿರುವ ಹಿಂದುತ್ವ ಸಂಘಟನೆಗಳು ಇದೀಗ ಟಿಪ್ಪು ಮಸೀದಿಯನ್ನು ಹನುಮಾನ್ ದೇಗುಲದ ಮೇಲೆ ನಿರ್ಮಿಸಲಾಗಿದೆ ಎಂದು ವಾದಿಸಿದೆ.

- Advertisement -

ಟಿಪ್ಪು ಮಸೀದಿ ಅಂತಲೆ ಕರೆಯಲಾಗುವ ಶ್ರೀರಂಗಪಟ್ಟಣ ಜಾಮಿಯಾ ಮಸೀದಿಯ ವಿರುದ್ಧ ಮಂಡ್ಯ ಜಿಲ್ಲಾಧಿಕಾರಿ ಅವರಿಗೆ ‘ನರೇಂದ್ರ ಮೋದಿ ವಿಚಾರ ಮಂಚ್’ ಎಂಬ ಸಂಘಟನೆ ಮನವಿಯನ್ನು ನೀಡಿದೆ. ಅಲ್ಲದೇ, ಮಸೀದಿಯನ್ನು ಹಿಂದೂಗಳಿಗೆ ಹಸ್ತಾಂತರಿಸುವಂತೆ ಆಗ್ರಹಿಸಿದೆ.

ಇನ್ನೊಂದೆಡೆ ಮಸೀದಿ ಆಡಳಿತ ಮಂಡಳಿಯೂ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ, ರಕ್ಷಣೆ ಒದಗಿಸುವಂತೆ ಕೇಳಿಕೊಂಡಿದೆ.



Join Whatsapp