ಮಡಿಕೇರಿ| ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದ ಕಲಾವಿದನ ಫೋಟೋ ಗ್ಯಾಲರಿ ತೆರವು

Prasthutha|

ಕೊಡಗು: ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಅಕ್ರಮ ಕಟ್ಟಡ ನಿರ್ಮಾಣ ಮಾಡಿಕೊಂಡು ನಗರಸಭೆ ಅಧಿಕಾರಿಗಳಿಗೆ ಜೀವ ಬೆದರಿಕೆ ಹಾಕುತ್ತಿದ್ದ ಕಲಾವಿದನ ಫೋಟೋ ಗ್ಯಾಲರಿಯನ್ನು ಇಂದು ಬೆಳ್ಳಂಬೆಳಗ್ಗೆ ನಗರಸಭೆಯ ಅಧಿಕಾರಿಗಳು ತೆರವು ಮಾಡಿದರು.

- Advertisement -

ಚೈನ್ ಗೇಟ್ ಬಳಿ ನಿರ್ಮಾಣ ಮಾಡಿಕೊಂಡಿದ್ದ ಕಟ್ಟಡ ತೆರವು ವೇಳೆ  ಚಿತ್ರ ಕಲಾವಿದನ ಕುಟುಂಬ ಹೈಡ್ರಾಮ ಸೃಷ್ಟಿಸಿದರು.  ಈ ಹಿಂದೆಯೂ ತೆರವು ಕಾರ್ಯಾಚರಣೆ ವೇಳೆ ಚಿತ್ರಕಲಾವಿದ ಸಂದೀಪ್ ಮತ್ತು ಕುಟುಂಬದಿಂದ ಗ್ಯಾಸ್ ಆನ್ ಮಾಡಿ ಬೆಂಕಿ ಹಚ್ಚಿಕೊಳ್ಳುತ್ತೇವೆ ಎಂದು ನಗರಸಭೆ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದರು.

ಇಂದು ಮಡಿಕೇರಿ ತಹಶೀಲ್ದಾರ್ ಮಹೇಶ್ ನಗರಸಭೆ ಆಯುಕ್ತ ರಾಮದಾಸ್ ನೇತೃತ್ವದಲ್ಲಿ ಫೋಟೋ ಗ್ಯಾಲರಿ ತೆರವು ಕಾರ್ಯಾಚರಣೆ ಮಾಡಲಾಯಿತು. ಬೆಳಿಗ್ಗೆ 6:30ರ ಸುಮಾರಿಗೆ ನೂರಾರು ಪೊಲೀಸರೊಂದಿಗೆ ಆಗಮಿಸಿದ ನಗರಸಭೆಯ ಅಧಿಕಾರಿಗಳು ಯಾವುದೇ ಮಾಹಿತಿ ಹಾಗೂ ನೋಟಿಸ್ ನೀಡದೆ ಏಕಾಏಕಿ ಬಂದು ದೌರ್ಜನ್ಯ ನಡೆಸಿದ್ದಾರೆ ಎಂದು ಕಲಾವಿದನ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.



Join Whatsapp