ವಾಷಿಂಗ್ಟನ್: ಇಸ್ರೇಲ್ ಸೈನಿಕರ ಗುಂಡೇಟಿಗೆ ಮೃತಪಟ್ಟ ಅಲ್ ಜಝೀರಾದ ಹಿರಿಯ ಪತ್ರಕರ್ತೆ ಶಿರೀನ್ ಅಬು ಅಕ್ಲೆಹ್ ಅವರಿಗೆ ಸಹುದ್ಯೋಗಿಗಳು ಅಲ್ ಜಝೀರಾ ಕಚೇರಿ ಮುಂಭಾಗ ಜಮಾಯಿಸಿ ಸಂತಾಪ ಸೂಚಿಸಿದ್ದಾರೆ. ಆಕೆಯ ಹತ್ಯೆಗೆ ಪ್ರಪಂಚದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇಸ್ರೇಲ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ವರದಿ ಮಾಡುತ್ತಿರುವಾಗ ಇಸ್ರೇಲ್ ಸೈನಿಕರು ಗುಂಡಿಟ್ಟು ಅವರನ್ನು ಹತ್ಯೆ ಮಾಡಿದ್ದರು. ಅಕ್ಲೆಹ್ ಅವರಿಗೆ ಜಗತ್ತಿನಾದ್ಯಂತ ಪತ್ರಕರ್ತರು ಗೌರವ ಸಲ್ಲಿಸಿದ್ದಾರೆ. ಸಹೋದ್ಯೋಗಿಗಳು ದಿವಂಗತ ಪತ್ರಕರ್ತೆಯ ಭಾವಚಿತ್ರಗಳನ್ನು ಪ್ರದರ್ಶಿಸಿ “ಪತ್ರಿಕೋದ್ಯಮ ಅಪರಾಧವಲ್ಲ” ಎಂಬ ಭಿತ್ತಿಪತ್ರ ಹಿಡಿದು ಗಮನ ಸೆಳೆದಿದ್ದಾರೆ.
ಈ ಮಧ್ಯೆ ಲುಸೈಲ್ ನಲ್ಲಿರುವ ಅಲ್ ಜಬರ್ ಅವಳಿ ಟವರ್ಸ್ ನಲ್ಲಿ ಫೆಲೆಸ್ತೀನ್ ಧ್ವಜದೊಂದಿಗೆ ದಿವಂಗತ ಶೆರೀನ್ ಅಬು ಅಕ್ಲೆಹ್ ಅವರ ಫೋಟೋವನ್ನು ಲೈಟಿಂಗ್ ಮೂಲಕ ಪ್ರದರ್ಶಿಸಲಾಗಿದೆ.