ಧ್ವನಿವರ್ಧಕ ವಿವಾದ; ತೀರ್ಪು ದೇವಸ್ಥಾನಕ್ಕೂ ಅನ್ವಯ: ಶಶಿಕಲಾ ಜೊಲ್ಲೆ

Prasthutha|

ಬೆಂಗಳೂರು: ರಾಜ್ಯಾದ್ಯಂತ ಭುಗೆಲೆದ್ದಿರುವ ಧಾರ್ಮಿಕ ಕೇಂದ್ರಗಳಲ್ಲಿನ  ಧ್ವನಿವರ್ಧಕ ಅಳವಡಿಕೆ ವಿವಾದದ ಕುರಿತು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯಿಸಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋರ್ಟ್‌ ಸುತ್ತೊಲೆ ಹೊರಡಿಸಿರುವುದು ನಮಗೆ ಅನ್ವಯ ಆಗುತ್ತದೆ. 2002 ರಲ್ಲೇ ಧಾರ್ಮಿಕ ಕ್ಷೇತ್ರಗಳಲ್ಲಿ ಎಷ್ಟು ಡೆಸಿಬಲ್ ಮೈಕ್ ಹಾಕಬೇಕು ಅಂತ ಕೋರ್ಟ್ ಹೇಳಿದೆ. ಈ ತೀರ್ಪನ್ನು ಎಲ್ಲರೂ ಪಾಲಿಸಬೇಕು.  ಪೊಲೀಸ್ ಇಲಾಖೆ, ಪರಿಸರ ಮಾಲಿನ್ಯ ಇಲಾಖೆ ಕ್ರಮಕೈಗೊಳ್ಳುತ್ತದೆ. ಈ ತೀರ್ಪು ಕೇವಲ ಮಸೀದಿ ಮಾತ್ರವಲ್ಲ, ನಮ್ಮ ದೇವಸ್ಥಾನಕ್ಕೂ ಅನ್ವಯ ಆಗುತ್ತದೆ ಎಂದು ಹೇಳಿದರು.

ದೇವಾಲಯಗಳಲ್ಲಿ ಬೆಳಿಗ್ಗೆ ಸುಪ್ರಭಾತ, ಮಸೀದಿಗಳಲ್ಲಿ ಅಝಾನ್ ಮೊಳಗುತ್ತದೆ. ಅದಕ್ಕೆ ನಿಗದಿತ ಸಮಯವೂ ಇರುತ್ತದೆ. ಅದರಂತೆ ಪಾಲನೆ ಮಾಡುತ್ತಾರೆ. ರಾತ್ರಿ, ಹಗಲು‌ ಧ್ವನಿವರ್ಧಕ ಹಾಕುವುದು ತಪ್ಪು ಎಂದು ಹೇಳಿದರು.



Join Whatsapp