ವರ್ಷದೊಳಗೆ ಮೊಮ್ಮಗು ಕೊಡಿ ಇಲ್ಲವೇ 5 ಕೋಟಿ ವಾಪಸು ಕೊಡಿ | ಮಗ, ಸೊಸೆಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ದಂಪತಿ

Prasthutha|

ಉತ್ತರಾಖಂಡ: ವರ್ಷದೊಳಗೆ ಮೊಮ್ಮಗು ಕೊಡಿ ಅಥವಾ 5 ಕೋಟಿ ಪರಿಹಾರ ನೀಡಿ ಎಂದು ವೃದ್ಧ ದಂಪತಿಯೊಂದು ಕೋರ್ಟ್ ಮೊರೆ ಹೋಗಿರುವ ಘಟನೆ ಉತ್ತರಾಖಂಡನ ಹರಿದ್ವಾರದಲ್ಲಿ ನಡೆದಿದೆ.

- Advertisement -

ಹರಿದ್ವಾರದ ನಿವಾಸಿ ಸಂಜೀವ್ ರಂಜನ್ ಪ್ರಸಾದ್ BHEL ನಿಂದ ಸದ್ಯ ನಿವೃತ್ತಿ ಪಡೆದುಕೊಂಡಿದ್ದು, ಸದ್ಯ ಪತ್ನಿ ಸಾಧನಾ ಜೊತೆ ಹೌಸಿಂಗ್ ಸೊಸೈಟಿಯಲ್ಲಿ ವಾಸವಾಗಿದ್ದಾರೆ. ಈ ದಂಪತಿ ತಮ್ಮ ಏಕೈಕ ಪುತ್ರ ಶ್ರೇಯ್ ಸಾಗರ್ ಅವರಿಗೆ ನೋಯ್ಡಾ ನಿವಾಸಿ ಶುಭಾಂಗಿ ಸಿನ್ಹಾ ಜೊತೆ 2016ರಲ್ಲಿ ವಿವಾಹ ಮಾಡಿಸಿದ್ದರು. ಶ್ರೇಯ್ ಪೈಲಟ್ ಆಗಿದ್ದರೆ, ಶುಭಾಂಗಿ ನೋಯ್ಡಾದಲ್ಲಿ ಕೆಲಸ ಮಾಡುದ್ದಾರೆ.

ಮದುವೆಯಾಗಿ ಆರು ವರ್ಷ ಕಳೆದರೂ ಇವರಿಗೆ ಮಕ್ಕಳಾಗಿಲ್ಲ. ಅದಕ್ಕಾಗಿ ಇಬ್ಬರೂ ಯಾವುದೇ ರೀತಿಯ ಪ್ಲಾನಿಂಗ್ ಮಾಡುತ್ತಿಲ್ಲ ಎಂದು ಆರೋಪ ಮಾಡಿರುವ ವೃದ್ಧ ದಂಪತಿ, ಇದೀಗ ಹರಿದ್ವಾರ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ತಮಗೆ ಒಂದು ವರ್ಷದೊಳಗೆ ಮೊಮ್ಮಕ್ಕಳನ್ನು ನೀಡುವಂತೆ ಅಥವಾ ನಿಮ್ಮ ಮದುವೆಗಾಗಿ ತಾವು ಖರ್ಚು ಮಾಡಿರುವ 5 ಕೋಟಿ ರೂಪಾಯಿ ಹಣವನ್ನು ಪರಿಹಾರ ರೂಪದಲ್ಲಿ ವಾಪಸ್ ನೀಡುವಂತೆ ದೂರು ದಾಖಲಿಸಿದ್ದಾರೆ.



Join Whatsapp