ಹಿಮಾಚಲ ಪ್ರದೇಶ: ಇಲ್ಲಿನ ವಿಧಾನಸಭೆಯ ಆವರಣದಲ್ಲಿರುವ ಮುಖ್ಯದ್ವಾರದ ಹೊರ ಭಾಗದಲ್ಲಿ ಖಲಿಸ್ತಾನ ಧ್ವಜಗಳನ್ನು ಅಳವಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ನ ಮೊರಿಂಡಾದ ಹರವೀರ್ ಸಿಂಗ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಅಸೆಂಬ್ಲಿಯ ಆವರಣದ ಮುಖ್ಯದ್ವಾರದ ಹೊರ ಭಾಗದಲ್ಲಿ ಖಲಿಸ್ತಾನ ಧ್ವಜಗಳನ್ನು ಕಟ್ಟಿರುವುದು ಮೇ 8 ರಂದು ಬೆಳಕಿಗೆ ಬಂದ ಬೆನ್ನಲ್ಲೇ ರಾಜ್ಯಾದ್ಯಂತ ಭದ್ರತೆ ಹೆಚ್ಚಿಸಲಾಗಿದೆ ಮತ್ತು ಅಂತಾರಾಜ್ಯ ಗಡಿಗಳನ್ನು ಬಂದ್ ಮಾಡಲಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ನಿಷೇಧಿತ ಸಂಘಟನೆ ಸಿಖ್ ಫಾರ್ ಜಸ್ಟೀನ್, ಇದರ ಪ್ರಧಾನ್ ಕಾನೂನು ಸಲಹೆಗಾರ ಗುರುಪತ್ವಂತ್ ಸಿಂಗ್ ಪನ್ನು ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.