ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾಕ್ಕೆ ತಾನು ಕೂಡಿಟ್ಟ ಹಣ ಕಳುಹಿಸಿಕೊಟ್ಟ ಮುಸ್ಲಿಮ್ ಬಾಲಕಿ

Prasthutha|

ನವದೆಹಲಿ: ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾದ ಜನರಿಗೆ ತಮಿಳುನಾಡಿನ ಪುಟಾಣಿಯೊಬ್ಬಳು ತಾನು ಕೂಡಿಟ್ಟ ಅಷ್ಟೂ ಹಣವನ್ನು ನೀಡುವ ಮೂಲಕ ಉದಾರತೆ ಮೆರೆದಿದ್ದಾಳೆ
ರಾಮನಾಥಪುರಂನ ಬಾಲಕಿ ತಾನು ಈವರೆಗೂ ಉಳಿಸಿದ್ದ 74,400 ಹಣವನ್ನು ಜಿಲ್ಲಾಧಿಕಾರಿ ಶಂಕರ್ ಲಾಲ್ ಕುಮಾವತ್ ಅವರಿಗೆ ಕೊಟ್ಟು, ಸಂಕಷ್ಟದಲ್ಲಿರುವ ಶ್ರೀಲಂಕಾದ ಜನರಿಗೆ ತಲುಪಿಸುವಂತೆ ಕೋರಿದ್ದಾಳೆ.
ಹುಡುಗಿಯ ಕಾರ್ಯಕ್ಕೆ ಕೊಲಂಬೊದಲ್ಲಿರುವ ಭಾರತದ ಹೈ ಕಮಿಷನ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಭಾರತ ಮತ್ತು ಶ್ರೀಲಂಕಾ ಜನರ ನಡುವಿನ ಬಾಂಧವ್ಯದ ದೃಢತೆಯ ಅನಾವರಣ… ಎಂದು ಟ್ವೀಟ್ ಮಾಡಿದೆ.



Join Whatsapp