‘ನಮೋ’ ಎಂದರೆ ‘ನಮಗೆ ಮೋಸ’ ಎಂದಿದ್ದ ಮಧ್ವರಾಜ್; ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ

Prasthutha|

ಉಡುಪಿ: ನಮೋ ಎಂದರೆ ನಮಗೆ ಮೋಸ ಎಂದಿದ್ದ  ಮಾಜಿ ಸಚಿವ ಉಡುಪಿ ಕಾಂಗ್ರೇಸ್‍ ನಾಯಕ ಪ್ರಮೋದ್ ಮಧ್ವರಾಜ್ ಇದೀಗ ಮೋದಿ ಆಡಳಿತ ಮೆಚ್ಚಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. 

- Advertisement -

ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೇಸ್‍ ಹಾಗೂ ಇತರ ಪಕ್ಷದ ನಾಯಕರ ಸೇರ್ಪಡೆಗೆ ಬಿಜೆಪಿ ಕಾರ್ಯಕರ್ತರ ಅಸಮಾಧಾನ ಹೊರಬಿದ್ದಿದೆ. ಇದರ ನಡುವೆ ಪ್ರಭಾವಿ ನಾಯಕ ಸೇರ್ಪಡೆಗೊಂಡರೂ ಇನ್ನು ಉಡುಪಿ ಶಾಸಕ ರಘುಪತಿ ಭಟ್, ಸಂಸದೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವ ಸುನೀಲ್ ಕುಮಾರ್ , ಕೋಟಾ ಶ್ರೀನಿವಾಸ ಪೂಜಾರಿ, ಲಾಲಾಜಿ ಮೆಂಡನ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿಜೆಪಿ ನಾಯಕ ಯಶ್ಪಾಲ್ ಸುವರ್ಣ ಯಾರೂ ಕೂಡ ಮದ್ವರಾಜ್ ಬಿಜೆಪಿ ಸೇರ್ಪಡೆಗೊಂಡದ್ದನ್ನು ತಮ್ಮ ಫೇಸ್ಬುಕ್, ಟ್ವಿಟರ್ ಖಾತೆಗಳಲ್ಲಿ ಇನ್ನೂ ಸ್ವಾಗತಿಸಿಲ್ಲ. 

2018ರ ವಿಧಾನಸಭಾ ಚುನಾವಣೆಯ ವೇಳೆ ಪ್ರಣಾಳಿಕೆಯಲ್ಲಿ ಸುಳ್ಳು ಭರವಸೆಗಳನ್ನು ನೀಡಿ ಅನುಷ್ಠಾನ ಮಾಡಲಾಗದೆ ವೈಫಲ್ಯ ಹೊಂದಿದ ಹಾಗೂ ಯಾವುದೇ ಗಮನಾರ್ಹ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಜಾರಿಗೆ ತರಲಾಗದ, ಶಾಸಕರಾಗಿ ಐದು ವರ್ಷಗಳ ಕಾಲ ಉಡುಪಿಯ ಆಶೋತ್ತರಗಳಿಗೆ ವಿರುದ್ಧವಾಗಿ ಭೃಷ್ಟಾಚಾರ ಮಾಡಿ ಪ್ರಗತಿಯನ್ನು ಕುಂಠಿತಗೊಳಿಸಿ ಜನರನ್ನು ವಂಚಿಸಿದ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ವಿರುದ್ದ 2018ರ ಚುನಾವಣೆಯ ಸಂದರ್ಭ ಉಡುಪಿ ಬಿಜೆಪಿ ಆರೋಪ ಪಟ್ಟಿಯನ್ನು ಬಿಡುಗಡೆಗೊಳಿಸಿತು.

- Advertisement -

ಇದಕ್ಕೆ ಪ್ರತಿಯಾಗಿ ಉಡುಪಿಯ ಶಾಸಕನಾಗಿ, ಕಂದಾಯ ಸಚಿವ ಸಂಸದೀಯ ಕಾರ್ಯದರ್ಶಿಯಾಗಿ ಬಳಿಕ ಜಿಲ್ಲಾ ಉಸ್ತುವಾರಿ ಸಚಿವನಾಗಿ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ 2026 ಕೋಟಿ ರೂ.ಅನುದಾನವನ್ನು ತಂದು ಸರ್ವತೋಮುಖ ಅಭಿವೃದ್ಧಿ ಪಡಿಸಿದ್ದು, ತನ್ನ ವಿರುದ್ಧ ಆರೋಪ ಪಟ್ಟಿಯನ್ನು ಬಿಡುಗಡೆಗೊಳಿಸುವ ಮುನ್ನ ಉಡುಪಿ ಸಂಸದೆಯಾಗಿರುವ ಶೋಭಾ ಅವರ ಕಳೆದ ನಾಲ್ಕು ವರ್ಷಗಳ ಸಾಧನಾ ಪಟ್ಟಿಯನ್ನು ಬಿಡುಗಡೆಗೊಳಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಪ್ರತಿ ಸವಾಲು ಹಾಕಿದ್ದರು. 

ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಮತ್ತು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆಯವರು ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶಾಸಕ ಪ್ರಮೋದ್ ಮಧ್ವರಾಜ್ ವಿರುದ್ದ ಆರೋಪ ಪಟ್ಟಿಯನ್ನು ಬಿಡುಗಡೆಗೊಳಿಸಿದರು.
ಬಳಿಕ ಮಾತಾನಾಡಿದ ಮಾಜಿ ಶಾಸಕ ರಘುಪತಿ ಭಟ್ ಅವರು, ಪ್ರಮೋದ್ ಮಧ್ವರಾಜ್ ಉಡುಪಿಯ ಶಾಸಕರಾಗಿ ಆಯ್ಕೆಯಾದ ಬಳಿಕ ಉಡುಪಿಯ ಅಭಿವೃದ್ಧಿ ಸಂಫೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಚುನಾವಣಾ ಪ್ರಣಾಳಿಕೆಯಲ್ಲಿ 500 ಕೋಟಿ ವೆಚ್ಚದ ಮಲ್ಪಿಸ್ಪೆಷಾಲಿಟಿ ಆಸ್ಪತ್ರೆಯನ್ನು ಉಡುಪಿಯಲ್ಲಿ ಮಾಡಲಾಗುತ್ತದೆ ಎಂದು ಘೋಷಿಸಿ ಐದು ವರ್ಷಗಳಲ್ಲಿ ಈ ಕುರಿತು ಯಾವುದೇ ಚಕಾರವೆತ್ತದೆ, ಇರುವ ಜಿಲ್ಲಾ ಆಸ್ಪತ್ರೆಯನ್ನು ಕೂಡ ಅಭಿವೃದ್ದಿಗೊಳಿಸದೆ ಇರುವುದು ಇವರ ನಿರ್ಲಕ್ಷ್ಯತನವನ್ನು ತೋರಿಸುತ್ತದೆ.
ಉಡುಪಿ ಹೃದಯಭಾಗದಲ್ಲಿರುವ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಯಾವುದೇ ಟೆಂಡರ್ ಕರೆಯದೆ, ಯಾವುದೇ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿ ದುಬೈ ಮೂಲದ ಉದ್ಯಮಿಗೆ 30 ವರ್ಷಗಳ ಗುತ್ತಿಗೆ ನೀಡಿ ಕೋಟ್ಯಾಂತರ ಭ್ರಷ್ಟಾಚಾರಕ್ಕೆ ಕಾರಣರಾಗಿದ್ದಾರೆ.


ಪ್ರಮೋದ್ ಅವರು ಶಾಸಕರಾದ ಬಳಿಕ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ರಸ್ತೆಯನ್ನು ಚತುಷ್ಪಥವಾಗಿ ಅಭಿವೃದ್ಧಿಪಡಿಸಿಲ್ಲ. ಉಡುಪಿಗೆ ಮಂಜೂರಾದ ಸ್ನಾತಕೊತ್ತರ ಕೇಂದ್ರವನ್ನು ಉಳಿಸಿಕೊಳ್ಳುವಲ್ಲಿ ಕೂಡ ಶಾಸಕರು ವಿಫಲರಾಗಿದ್ದಾರೆ.
ಬ್ರಹ್ಮಾವರ ಪುರಸಭೆ  ರಚನೆಗೆ ನೈಜವಾಗಿ ಅರ್ಹತೆ ಇದ್ದರೂ ಅದನ್ನು ಮಂಜೂರು ಮಾಡಿಸಿಕೊಳ್ಳಲು ಶಾಸಕ ಪ್ರಮೋದ್ ವಿಫಲರಾಗಿದ್ದು, ಕೊನೆಯ ಕ್ಷಣದಲ್ಲಿ ತಾಲೂಕು ಘೋಷಣೆ ಮಾಡಿಕೊಂಡದ್ದು ಬಿಟ್ಟರೆ ಅದರ ಕುರಿತಾದ ಯಾವುದೇ ಅಭಿವೃದ್ದಿ ಕಾರ್ಯಗಳು ಕೈಗೊಂಡಿಲ್ಲ ಎಂದು ಆರೋಪಿಸಿದರು.



Join Whatsapp