ಈದ್ ಉಡುಪು ಧರಿಸಲು ಅವಕಾಶ ನೀಡಿದ್ದಕ್ಕೆ ಪ್ರಾಂಶುಪಾಲೆ ವಿರುದ್ಧ ಕೇಸ್ ದಾಖಲು
ಲಕ್ನೋ: ಶಾಲಾ ಚಟುವಟಿಕೆಯ ಭಾಗವಾಗಿ ಈದ್ ವೇಷಭೂಷಣ ಧರಿಸಿ ವೀಡಿಯೋಗಳನ್ನು ಪೋಸ್ಟ್ ಮಾಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ ಪ್ರಾಂಶುಪಾಲರ ವಿರುದ್ಧ ಪ್ರಕರಣ ದಾಖಲಿಸಿರುವ ಘಟನೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದಿದೆ.
ವಿ.ಎಚ್.ಪಿ ನಾಯಕಿ ಲಾಲಮಣಿ ತಿವಾರಿ ನೀಡಿದ ದೂರಿನ ಆಧಾರದಲ್ಲಿ ಪ್ರಯಾಗ್ ರಾಜ್ ಹವೇಲಿಯಾದಲ್ಲಿರುವ ನ್ಯಾಯನಗರ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲೆ ಬುಶ್ರಾ ಮುಸ್ತಫಾ ವಿರುದ್ಧ ಐಪಿಸಿ ಸೆಕ್ಷನ್ 153 ಎ, ಐಟಿ ಕಾಯ್ದೆ 67 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಈ ಮಧ್ಯೆ ಶಾಲಾ ಆಡಳಿತ ಮಂಡಳಿ ಪ್ರಾಂಶುಪಾಲರನ್ನು ಸಮರ್ಥಿಸಿಕೊಂಡಿದ್ದು, ಇತರ ಹಬ್ಬಗಳಾದ ದೀಪಾವಳಿ, ದಸರಾ, ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ಹಲವು ಸಂದರ್ಭದಲ್ಲಿ ಇಂತಹ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದೆ.