ಮಂಗಳೂರು : ರಾಷ್ಟ್ರದ ಅತೀ ದೊಡ್ಡ ಸುನ್ನಿ ವಿದ್ಯಾರ್ಥಿ ಒಕ್ಕೂಟವಾದ ಎಸ್ಸೆಸ್ಸೆಫ್ ತನ್ನ ಅಭೂತಪೂರ್ವವಾದ ಸಾಮಾಜಿಕ ಶೈಕ್ಷಣಿಕ ಸಾಧನೆಗಳೊಂದಿಗೆ ಸುವರ್ಣ ಮಹೋತ್ಸವಕ್ಕೆ ಕಾಲಿರಿಸಿದ್ದು ಕಳೆದ ಐದು ದಶಕಗಳಿಂದ ರಾಷ್ಟ್ರದ ಘನತೆಯನ್ನು ಎತ್ತಿಹಿಡಿಯುವ ಮತ್ತು ಸಂವಿಧಾನಕ್ಕೆ ಬದ್ಧವಾದ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಸೇವೆಗಳನ್ನು ನೀಡುತ್ತಾ ಬಂದಿದೆ.
ಇದರ ಸುವರ್ಣ ಮಹೋತ್ಸವದ ಘೋಷಣೆಗೆ ಮೇ 08 ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಶೈಖ್ ಅಬೂಬಕರ್ ಅಹ್ಮದ್ ಚಾಲನೆ ನೀಡಲಿದ್ದು ಅದೇ ಸಂದರ್ಭ ಎಸ್ಸೆಸ್ಸೆಫ್ ಸಕ್ರಿಯವಾಗಿ ಕಾರ್ಯಾಚರಿಸುತ್ತಿರುವ ರಾಷ್ಟ್ರದ 20 ರಾಜ್ಯಗಳಲ್ಲಿ ಕೂಡ ಸಮಾವೇಶಗಳು ನಡೆಯಲಿವೆ. ಕರ್ನಾಟಕ ರಾಜ್ಯ ಮಟ್ಟದ ಸಮಾವೇಶವು ಮಂಗಳೂರಿನ ಅಡ್ಯಾರ್ ಕಣ್ಣೂರು ಮೈದಾನದಲ್ಲಿ ಮೇ 08, ಆದಿತ್ಯವಾರ 3:00 ಗಂಟೆಗೆ ಆರಂಭವಾಗಲಿದೆ.
ಮರ್ಕಝ್ ನಾಲೇಡ್ಜ್ ಸಿಟಿ ಮ್ಯಾನೇಜಿಂಗ್ ಡೈರೆಕ್ಟರ್ ಡಾ| ಮುಹಮ್ಮದ್ ಅಬ್ದುಲ್ ಹಕೀಮ್ ಅಝ್ಹರಿ ಹಾಗೂ ಖ್ಯಾತ ಅಂತಾರಾಷ್ಟ್ರೀಯ ಭಾಷಣಗಾರ ಹಾಫಿಝ್ ಇಹ್ಸಾನ್ ಖಾದ್ರಿ ಮುಖ್ಯ ಪ್ರಭಾಷಣ ನಡೆಸಲಿದ್ದು ರಾಜ್ಯದ ಹಲವು ಉಲಮಾ ಮತ್ತು ರಾಜಕೀಯ ನೇತಾರರು ಕಾರ್ಯಕ್ರಮಕ್ಕೆ ಭಾಗವಹಿಸಲಿದ್ದಾರೆ.