ಮಡಿಕೇರಿ: ಕೋಳಿ ಫಾರಂ ವಿರುದ್ಧ ಧರಣಿ

Prasthutha|

ಮಡಿಕೇರಿ: ಅನಧಿಕೃತ ಖಾಸಗಿ ಕೋಳಿ ಫಾರಂನಿಂದ ಆಗುತ್ತಿರುವ ತೊಂದರೆಯಿಂದ ಹಂಡ್ಲಿ ಗ್ರಾಮ ಪಂಚಾಯಿತಿಗೆ ಗ್ರಾಮಸ್ಥರು ಮನವಿ ಮಾಡಿದರು. ಆದರೆ ಈ ಕುರಿತು  ಯಾವುದೇ ಕ್ರಮ ಕೈಗೊಂಡಿರಲಿಲ್ಲ ಹಾಗಾಗಿ ಅಧಿಕಾರಿಗಳ ವಿಳಂಬ ಧೋರಣೆಯನ್ನು  ಖಂಡಿಸಿ ಹುಲುಸೆ  ಗ್ರಾಮಸ್ಥರು ಪ್ರತಿಭಟನೆ ಮಾಡಿದರು. ಹಂಡ್ಲಿ ಗ್ರಾಮ ಪಂಚಾಯಿತಿಯವರು  ಲಿಖಿತ ರೂಪದಲ್ಲಿ ಭರವಸೆ  ಸಿಕ್ಕಿದ ಕಾರಣ ಪ್ರತಿಭಟನೆಯನ್ನು ಬುಧುವಾರ ವರೆಗೆ  ಮುಂದೂಡಲಾಗಿದೆ

- Advertisement -

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹಂಡ್ಲಿ ಗ್ರಾಮ ಪಂಚಾಯಿತಿಗೆ ಸೇರಿದ  ಹುಲುಸೆ ಗ್ರಾಮದಲ್ಲಿ ಅನಧಿಕೃತ ವಾದ ಕೋಳಿ ಫಾರಂ ನಡೆಸಿಕೊಂಡು ಬಂದಿರುತ್ತಾರೆ.  ಈ ಕೋಳಿ ಫಾರಂನಿಂದ ಹುಲುಸೆ ಹಾಗೂ ಬಳ್ಳಾರಿಯಲ್ಲಿ ಗ್ರಾಮಸ್ಥರಿಗೆ ತುಂಬಾ ತೊಂದರೆಯಾಗುತ್ತಿದ್ದು ಇದನ್ನು ಮುಚ್ಚುವಂತೆ ಕಳೆದ 5ವರ್ಷದಿಂದ  ಹಂಡ್ಲಿ  ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದರು.

ಆದರೆ ಯಾವುದೇ ಪ್ರಯೋಜನ ಕಂಡಿರಲಿಲ್ಲ ಹಾಗಾಗಿ ಹುಲುಸೆ  ಹಾಗೂ ಬಳ್ಳಾರಿಯಲ್ಲಿ ಗ್ರಾಮಸ್ಥರು ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು . ಈ ಪ್ರತಿಭಟನೆಯನ್ನು ಅರಿತ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರುಗಳು ಹಾಗೂ ಅಭಿವೃದ್ಧಿ ಅಧಿಕಾರಿಯವರು ಶುಕ್ರವಾರ ಸಭೆ ಸೇರಿಸಿ ನಿರ್ಣಯ ಕೈಗೊಂಡಿರುತ್ತಾರೆ.

- Advertisement -

 ಆ ನಿರ್ಣಯದ ಪ್ರಕಾರ ಬುಧುವಾರ ಅಂದರೆ 11/5/2022 ರಂದು ಕೋಳಿ ಫಾರಂ ನ್ನು ಜಪ್ತಿ ಮಾಡಲು ಈಗಾಗಲೇ ಶನಿವಾರಸಂತೆ ಪೊಲೀಸ್ ಠಾಣೆಗೆ ಲೆಟರ್ ಕೊಟ್ಟಿರುತ್ತಾರೆ ಹಾಗಾಗಿ ಈ ಪ್ರತಿಭಟನೆಯನ್ನು ಮುಂದೂಡಲಾಗಿದೆ . ಒಂದು ವೇಳೆ ಅನಧಿಕೃತ ಕೋಳಿಫಾರಂ ಮೇಲೆ ಕ್ರಮ ಕೈಗೊಳ್ಳದೇ ಹೋದರೆ  ಬುಧವಾರ ದಿನ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಗ್ರಾಮಸ್ಥರ ಪರವಾಗಿ ಕರ್ನಾಟಕ ರಕ್ಷಣಾ ವೇದಿಕೆಯ ಸೋಮವಾರಪೇಟೆ  ತಾಲ್ಲೂಕು ಅಧ್ಯಕ್ಷರು ತಿಳಿಸಿದ್ದಾರೆ.



Join Whatsapp