ಬೆಂಗಳೂರು: ಶಾಸಕ ಯತ್ನಾಳ್ ಗೆ ಯಾವಾಗ ನೋಟಿಸ್ ನೀಡುತ್ತೀರಾ? ಅಥವಾ ತನಿಖೆ ಮಾಡುತ್ತೀರಾ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ ಖಾದರ್ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
‘2,500 ಕೋಟಿ ರೂ. ಕೊಡಿ, ನಿಮ್ಮನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ದಿಲ್ಲಿಯಿಂದ ಬಂದವರು ಹೇಳಿದ್ದರು’ ಎಂಬ ಬಿಜೆಪಿ ಶಾಸಕ ಯತ್ನಾಳ್ ಅವರ ಹೇಳಿಕೆಗೆ ಸಂಬಂಧಿಸಿ ಟ್ವೀಟ್ ಮಾಡಿರುವ ಅವರು, ”ಪಿಎಸ್ ಐ ನೇಮಕಾತಿ ಹಗರಣದ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕರಿಗೆ ಸರ್ಕಾರವೇ ಮುಂದೆ ನಿಂತು ನೋಟಿಸ್ ನೀಡಿತ್ತು. ಈಗ ಬಿಜೆಪಿಯ ಶಾಸಕ ಬಸವನಗೌಡ ಯತ್ನಾಳ್ ಅವರೇ ಮುಖ್ಯಮಂತ್ರಿ ಹುದ್ದೆಗೆ ಹರಾಜು ದರವನ್ನ ಪ್ರಕಟಿಸಿದ್ದಾರೆ. ಈಗೇನು ತನಿಖೆ ಮಾಡ್ತೀರಾ? ನೋಟಿಸ್ ನೀಡ್ತಿರಾ? ಜನ ನಿಮ್ಮನ್ನ ಇನ್ನು ಸಹಿಸೋಲ್ಲ” ಎಂದು ಬರೆದುಕೊಂಡಿದ್ದಾರೆ.