ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎ.ಆರ್​. ರೆಹಮಾನ್ ಪುತ್ರಿ ಖತೀಜಾ

Prasthutha|

ನವದೆಹಲಿ: ಖ್ಯಾತ ಸಂಗೀತ ನಿರ್ದೇಶಕ ಎ.ಆರ್​. ರೆಹಮಾನ್​ ಪುತ್ರಿ ಖತೀಜಾ ರೆಹಮಾನ್ ಅವರು ರಿಯಾಸ್ದೀನ್​ ಶೇಖ್​ ಮೊಹಮ್ಮದ್​ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

- Advertisement -

ರಿಯಾಸ್ದೀನ್​ ಎಂಜಿನಿಯರಿಂಗ್‌ ಪದವಿ ಪಡೆದಿದ್ದು, ಉದ್ಯಮಿಯಾಗಿದ್ದಾರೆ. ಮದುವೆ ಸಮಾರಂಭದ ಫೋಟೊಗಳನ್ನು ಎ.ಆರ್​. ರೆಹಮಾನ್ ಹಾಗೂ ಖತೀಜಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 

ಟ್ವಿಟರ್‌ ನಲ್ಲಿ ಮಗಳ ಮದುವೆ ಫೋಟೊ ಹಂಚಿಕೊಂಡಿರುವ ರೆಹಮಾನ್, ‘ಸರ್ವಶಕ್ತನು ದಂಪತಿಯನ್ನು ಆಶೀರ್ವದಿಸಲಿ … ನಿಮ್ಮ ಶುಭ ಹಾರೈಕೆಗಳು ಮತ್ತು ಪ್ರೀತಿಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ.



Join Whatsapp