ಮುಂಬೈ: ಭಾರತ ತಂಡದ ಮಾಜಿ ಆಟಗಾರ ಅರುಣ್ ಲಾಲ್ ತಮ್ಮ 66ನೇ ವಯಸ್ಸಿನಲ್ಲಿ ಬುಲ್ ಬುಲ್ ಸಹಾ ಎಂಬುವವರನ್ನು ಎರಡನೇ ವಿವಾಹವಾಗಿದ್ದಾರೆ. ವಿಶೇಷ ಎಂದರೆ ಬುಲ್ ಬುಲ್ ಸಹಾ ಅವರಿಗಿಂತ 28 ವರ್ಷ ಚಿಕ್ಕವರು.
ಅರುಣ್ ಲಾಲ್ ತನ್ನ ಮೊದಲ ಪತ್ನಿ ರೀನಾದಿಂದ ದೂರವಾಗಿದ್ದರು. ಅಲ್ಲದೆ ಎರಡನೇ ಮದುವೆಗೆ ಅವರ ಒಪ್ಪಿಗೆಯನ್ನೂ ಪಡೆದಿದ್ದರು. ಇನ್ನು ಮೊದಲ ಪತ್ನಿ ರೀನಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಅರುಣ್ ಲಾಲ್ 2ನೇ ಮದುವೆಯಾದರೂ ಅವರ ಮೊದಲ ಪತ್ನಿಯನ್ನು 2ನೇ ಪತ್ನಿ ಬುಲ್ ಬುಲ್ ಸಾಹ ನೋಡಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿತ್ತು. ಅರುಣ್ ಲಾಲ್ ಪ್ರಸ್ತುತ ಬಂಗಾಳ ತಂಡದ ಮುಖ್ಯ ಕೋಚ್ ಆಗಿದ್ದಾರೆ.