PSI ನೇಮಕಾತಿ ಅಕ್ರಮ ಪ್ರಕರಣ: ಇಬ್ಬರು ಪೊಲೀಸ್ ಅಧಿಕಾರಿಗಳ ಬಂಧನ !

Prasthutha|

ಕಲಬುರಗಿ: ಪಿಎಸ್ಐ ನೇಮಕಾತಿಯ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಮಹತ್ತರ ಹೆಜ್ಜೆ ಇಟ್ಟಿರುವ ಸಿಐಡಿ, ಗುರುವಾರ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಬಂಧಿಸಿದೆ.

- Advertisement -

ರಾಯಚೂರು ಜಿಲ್ಲೆಯ ಲಿಂಗಸೂಗುರು ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ,  ಬೆರಳಚ್ಚು ವಿಭಾಗದ ಸಿಪಿಐ ಆನಂದ ಮೇತ್ರೆ ಅವರ ಬಂಧನವಾಗಿದೆ. ಸಾಲಿ ಈ ಹಿಂದೆ ಆಳಂದ ವಿಭಾಗದ ಡಿಎಸ್ಪಿಯಾಗಿದ್ದರು. ಇಲ್ಲಿಯವರೆಗೆ ಬಂಧಿತರ ಸಂಖ್ಯೆ ಮೂವತ್ತು ದಾಟಿದೆ.

ನಿನ್ನೆಯಿಂದ ವಿಚಾರಣೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಇಂದು ಸತತ ನಾಲ್ಕು ಗಂಟೆಗಳ ಕಾಲ ವಿಚಾರಣೆ ಈ ಇಬ್ಬರು ಅಧಿಕಾರಿಗಳನ್ಬು ಬಂಧಿಸಲಾಯಿತು. ವೈದ್ಯಕೀಯ ಚಿಕಿತ್ಸೆ ಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಬಂಧಿತರು ಇಲ್ಲಿ ಯವರೆಗೆ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್  ಗಳು, ಅಭ್ಯರ್ಥಿಗಳು, ಪರೀಕ್ಷಾ ಕೇಂದ್ರದ ಮುಖ್ಯಸ್ಥರು, ಅಭ್ಯರ್ಥಿಗಳು ಬಂಧನವಾಗಿದ್ದರೆ ಇಂದು ಹಿರಿಯ ಪೊಲೀಸ್ ಅಧಿಕಾರಿಗಳು ಬಂಧನವಾಗಿರುವುದನ್ನು ನೋಡಿದರೆ ಈ ಪ್ರಕರಣ ದಲ್ಲಿ ಇನ್ನೂ ಹಿರಿಯ ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿರುವುದು ಸಾಬೀತು ಪಡಿಸುವಂತಾಗಿದೆ. ಇದಲ್ಲದೆ ಹಿರಿಯ ಶಾಸಕರ ಹಾಗೂ ಶಾಸಕರ ಸಹೋದರ ಹೆಸರೂ ಸಹ ಕೇಳಿ ಬರುತ್ತಿದೆ. ಒಟ್ಟಾರೆ ಈ ಅಕ್ರಮ ಬಗೆದಷ್ಟು ಆಳವಾಗುತ್ತಿದೆ.



Join Whatsapp