‘ಲವ್ ಜಿಹಾದ್’ ಕಾನೂನು ತರುವವರು ಮೊದಲು ಅವರ ನಾಯಕರ ಮಕ್ಕಳು ಯಾರು ಯಾರನ್ನು ಲವ್ ಮಾಡಿದ್ದಾರೆ ನೋಡಿಕೊಳ್ಳಲಿ : ಡಿಕೆಶಿ

Prasthutha|

ಉಡುಪಿ : ರಾಜ್ಯದಲ್ಲಿ ‘ಲವ್ ಜಿಹಾದ್’ ವಿರೋಧಿ ಕಾನೂನು ತರಲು ಉದ್ದೇಶಿಸಿರುವ ಬಿಜೆಪಿಗರು, ಮೊದಲು ತಮ್ಮ ಕೇಂದ್ರ ನಾಯಕರತ್ತ ಒಮ್ಮೆ ನೋಡಬೇಕು. ಯಾವ ಲೀಡರ್ ಮಕ್ಕಳು ಯಾರು ಯಾರನ್ನು ಲವ್ ಮಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಲಿ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

- Advertisement -

ಭಾರತ ದೇಶದಲ್ಲಿ ಜನರಿಗೆ ಪ್ರೀತಿ ಅವರ ಹಕ್ಕು. ಧರ್ಮ ವಿಶ್ವಾಸ, ಮಾನವೀಯತೆ ಎಲ್ಲವೂ ಗೌರವಿಸೋದು ಮುಖ್ಯ ಅಂತ ಅವರು ತಿಳಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೆ ನಗರಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದ್ದಾರೆ.

- Advertisement -

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಗೋಹತ್ಯೆ ನಿಷೇಧ ಕಾನೂನು ಹೊಸದೇನಲ್ಲ. ಇದು ಬಹಳ ಹಿಂದಿನಿಂದಲೂ ಅಸ್ತಿತ್ವದಲ್ಲಿದೆ. ‘ಲವ್ ಜಿಹಾದ್’ಗೆ ಸಂಬಂಧಿಸಿದಂತೆ ರಾಷ್ಟ್ರೀಯ ನಾಯಕರು ನಿರ್ಧಾರ ಕೈಗೊಳ್ಳಬೇಕು. ‘ಲವ್ ಜಿಹಾದ್’ ಕಾನೂನು ತರುವ ಮುನ್ನಾ ಯಾವ ನಾಯಕರ ಮಕ್ಕಳು ಯಾರನ್ನು ವಿವಾಹವಾಗಿದ್ದಾರೆ ನೋಡಲಿ ಎಂದು ಹೇಳಿದ್ದಾರೆ.



Join Whatsapp